Tuesday, December 2, 2025

ದಳಪತಿ ವಿಜಯ್‌ಗೆ ಭಾರೀ ಹಿನ್ನಡೆ: ಪುದುಚೆರಿ ರೋಡ್‌ ಶೋ ಗೆ ಅನುಮತಿ ಇಲ್ಲ!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ನಟ, ರಾಜಕಾರಣಿ ದಳಪತಿ ವಿಜಯ್‌ಗೆ ಭಾರಿ ಹಿನ್ನಡೆಯಾಗಿದ್ದು, ತಮಿಳಗ ವೆಟ್ರಿ ಕಳಗಂಪಕ್ಷ ಆಯೋಜಿಸಿದ್ದ ಪುದುಚೆರಿ ರೋಡ್‌ ಶೋ ರದ್ದಾಗಿದೆ.

ಡಿಸೆಂಬರ್‌ 5ರಂದು ಪಕ್ಷ ಆಯೋಜಿಸಲು ಉದ್ದೇಶಿಸಿದ್ದ ರ‍್ಯಾಲಿಗೆ ಪುದುಚೆರಿ ಪೊಲೀಸರು ಅನುಮತಿ ನೀಡಿಲ್ಲ. ಆ ಮೂಲಕ ವಿಜಯ್‌ಗೆ ಭಾರಿ ಮುಖಭಂಗವಾಗಿದೆ.

ರೋಡ್‌ ಶೋ ಬದಲಾಗಿ ಮೈದಾನದಲ್ಲಿ ಸಾರ್ವಜನಿಕ ಸಭೆ ನಡೆಸುವಂತೆ ಪೊಲೀಸರು ಸಲಹೆ ನೀಡಿದ್ದಾರೆ.

ಸೆಪ್ಟೆಂಬರ್‌ 27ರಂದು ತಮಿಳುನಾಡಿನ ಕರೂರಿನಲ್ಲಿ ತಮಿಳಗ ವೆಟ್ರಿ ಕಳಗಂ ಆಯೋಜಿಸಿದ್ದ ಚುನಾವಣಾ ರ‍್ಯಾಲಿಯಲ್ಲಿ ಕಾಲ್ತುಳಿತ ಸಂಭವಿಸಿ ಸುಮಾರು 41 ಮಂದಿ ಅಸುನೀಗಿದ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ರೋಡ್‌ ಶೋಗೆ ಅನುಮತಿ ಸಿಕ್ಕಿಲ್ಲ ಎನ್ನಲಾಗಿದೆ.

ಈಗಾಗಲೇ ಪಕ್ಷದ ಹಿರಿಯ ನಾಯಕರಾದ ಆನಂದ್‌ ಮತ್ತು ಆಧವ್‌ ಅರ್ಜುನ್‌ ರೋಡ್‌ ಶೋಗೆ ಸಿದ್ಧತೆ ನಡೆಸಿದ್ದು, ಅದರ ಬೆನ್ನಲ್ಲೇ ಈ ಬೆಳವಣಿಗೆ ಕಂಡುಬಂದಿದೆ.

ನಾವು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್‌ ಅವರೊಂದಿಗೆ ನಿರಂತರ ಸಭೆ ನಡೆಸಿದ ಬಳಿಕವಷ್ಟೇ ನಾವು ಅನುಮತಿ ನಿರಾಕರಿಸಿದ್ದೇವೆ ಎಂದು ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಆ ಮೂಲಕ ಇದರ ಹಿಂದ ಎರಾಜಕೀಯ ಪಿತೂರಿ ಇದೆ ಎನ್ನುವ ಆರೋಪವನ್ನು ತ‍ಳ್ಳಿ ಹಾಕಿದ್ದಾರೆ. ‘ಪುದುಚೆರಿಯಲ್ಲಿರುವ ಕಿರಿದಾದ ರಸ್ತೆ ಸಾಕಷ್ಟು ಅಪಾಯಕಾರಿ ಎನಿಸಿಕೊಂಡಿದೆ. ವಿಜಯ್‌ ರೋಡ್‌ ಶೋಗಾಗಿ ಸಾವಿರಾರು ಮಂದಿ ಜಮಾಯಿಸುವ ಸಾಧ್ಯತೆ ಇರುವುದರಿಂದ ಅನುಮತಿ ನೀಡಿಲ್ಲ’ ಎಂದು ವಿವರಿಸಿದ್ದಾರೆ.

error: Content is protected !!