ಶಬರಿಮಲೆಯಲ್ಲಿ ಇಂದು ಸಂಜೆ ಮಕರ ಜ್ಯೋತಿ ದರುಶನ, ದೇಗುಲದಲ್ಲಿ ಭಕ್ತಸಾಗರ

ಹೊಸದಿಗಂತ ಡಿಜಿಟಲ್ ಡೆಸ್ಕ್:

ವಿಶ್ವಪ್ರಸಿದ್ಧ ಶಬರಿಮಲೆಯಲ್ಲಿ ಇಂದು ಸಂಜೆ ಮಕರ ಜ್ಯೋತಿ ದರುಶನಕ್ಕೆ ಭಕ್ತಸಾಗರವೇ ಕಾದು ಕುಳಿತಿದೆ.
ಮಕರ ಜ್ಯೋತಿ ದರುಶನಕ್ಕೆ ಸಕಲ ಸಿದ್ಧತೆ ನಡೆದಿದ್ದು, ಮಕರ ಸಂಕ್ರಮಣ ಪೂಜೆ ನಡೆಯಲಿದೆ. ಸೂರ್ಯ ದೇವನು ಧನುರಾಶಿಯಿಂದ ಮಕರ ರಾಶಿಗೆ ಪ್ರವೇಶಿಸುವ ಕಾಲಘಟ್ಟವನ್ನು ಸಂಕ್ರಮಣ ಎನ್ನಲಾಗುತ್ತದೆ.

ಅಯ್ಯಪ್ಪಸ್ವಾಮಿ ದೇಗುಲದಲ್ಲಿ ಇಂದು ರಾತ್ರಿ 8:45 ಕ್ಕೆ ಮಕರ ಸಂಕ್ರಮಣ ಪೂಜೆ ನಡೆಯಲಿದೆ. ಸಂಜೆಯಿಂದಲೇ ದೀಪಾರಾಧನೆ ನಡೆಯಲಿದೆ. ಲಕ್ಷಾಂತರ ಭಕ್ತರು ಮಕರ ಜ್ಯೋತಿ ದರುಶನಕ್ಕಾಗಿ ಕಾದು ಕುಳಿತಿದ್ದಾರೆ. ಪೊನ್ನಂಬಲ ಮೇಡಿನಲ್ಲಿ ಮಕರ ಜ್ಯೋತಿ ದರುಶನವಾಗುತ್ತದೆ. ನಕ್ಷತ್ರ ಗೋಚರಿಸಿ ಗರ್ಭಗುಡಿ ಮೇಲೆ ಗರುಡ ಪ್ರದಕ್ಷಿಣೆ ನಡೆಯುತ್ತದೆ. ಜ್ಯೋತಿದರುಶನಕ್ಕಾಗಿ ಲಕ್ಷಾಂತರ ಭಕ್ತರು ಬೀಡುಬಿಟ್ಟಿದ್ದು, ಪೂಜಾಪ್ರಕ್ರಿಯೆಗಳು ನಡೆಯುತ್ತಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!