April 11, 2026
Saturday, April 11, 2026
spot_img

ಸಂಜು ಸ್ಯಾಮ್ಸನ್ ರಂತೆ ಚುನಾವಣೆಯಲ್ಲಿ ಅಬ್ಬರಿಸಿ: ಕೇರಳದ ಯುವಜನತೆಗೆ ಪ್ರಧಾನಿ ಮೋದಿ ಕರೆ!

ಹೊಸ ದಿಗಂತ ಡಿಜಿಟಲ್ ಡೆಸ್ಕ್

ದೇವರ ಸ್ವಂತ ನಾಡು ಕೇರಳದಲ್ಲಿ ಚುನಾವಣಾ ಕಣವು ಕಾವೇರುತ್ತಿದ್ದು, ಬಿಜೆಪಿ ಪರ ಪ್ರಧಾನಿ ಮೋದಿ ಭರ್ಜರಿ ಪ್ರಚಾರ ನಡೆಸುತ್ತಿದ್ದಾರೆ.

ವರ್ಚುವಲ್ ಸಂವಾದದಲ್ಲಿ ಬಿಜೆಪಿ ಕಾರ್ಯಕರ್ತರೊಂದಿಗೆ ಮಾತನಾಡಿದ ಅವರು, ಕೇರಳದ ಯುವಜನತೆ ಎಲ್‌ಡಿಎಫ್ ಮತ್ತು ಯುಡಿಎಫ್ ಮೈತ್ರಿಕೂಟಗಳ ಲೂಟಿಯಿಂದ ಬೇಸತ್ತಿದ್ದು, ಈ ಬಾರಿ ಎನ್‌ಡಿಎಗೆ ಅವಕಾಶ ಸಿಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಈ ವೇಳೆ ಕಾರ್ಯಕರ್ತರ ಉತ್ಸಾಹವನ್ನು ಹೆಚ್ಚಿಸಲು ಕೇರಳದ ಕ್ರಿಕೆಟಿಗ ಸಂಜು ಸ್ಯಾಮ್ಸನ್ ಅವರ ಉದಾಹರಣೆ ನೀಡುತ್ತಾ ಮಾತನಾಡಿದ ಮೋದಿ, ಯಾವ ರೀತಿ ಸಂಜು ವಿಶ್ವಕಪ್‌ನಂತಹ ನಿರ್ಣಾಯಕ ನಾಕೌಟ್ ಹಂತಗಳಲ್ಲಿ ಪ್ರದರ್ಶನ ನೀಡಿದ್ದಾರೆ ಎಂದು ಗಮನಿಸಿದ್ದೇವೆ. ಮೊದಲ ದಿನದಿಂದ ಕೊನೆಯವರೆಗೂ ಆತ್ಮವಿಶ್ವಾಸ, ಗಮನವಿಟ್ಟು ಆಡಿದ್ದಾರೆ . ಈ ಮೂಲಕ ಒಬ್ಬ ಉತ್ತಮ ಆಟಗಾರ ತಂಡಕ್ಕೆ ಅಗತ್ಯವಿರುವಾಗ ಸದಾ ಉತ್ತಮವಾಗಿ ಆಡುತ್ತಾನೆ. ಅದೇ ರೀತಿ, ಬಿಜೆಪಿ ಕಾರ್ಯಕರ್ತರು ಕೂಡ ಈ ಚುನಾವಣೆಯ ಕೊನೆಯ ಹಂತದಲ್ಲಿ ಸಂಜು ಸ್ಯಾಮ್ಸನ್ ಅವರಂತೆ ಅಬ್ಬರಿಸಬೇಕು ಎಂದು ಕರೆ ನೀಡಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !