ಬೇಕಾಗುವ ಸಾಮಾಗ್ರಿಗಳು
ಬೇಯಿಸಿದ ಬಾಳೇಕಾಯಿ ದೊಡ್ಡ ಗಾತ್ರದ್ದು 1, ಹಸಿಮೆಣಸಿನ ಕಾಯಿ 3, ಬೆಳ್ಳುಳ್ಳಿ ಶುಂಠಿ ಪೇಸ್ಟ್, ಅರ್ಧ ಕಪ್ ಈರುಳ್ಳಿ ತುರಿ, ಎರಡು ಬ್ರೆಡ್, ರುಚಿಗೆ ಬೇಕಾದಷ್ಟು ಉಪ್ಪು, ಶುದ್ಧ ತೆಂಗಿನೆಣ್ಣೆ
ಮಾಡುವ ವಿಧಾನ
ಬಾಳೇಕಾಯಿಯನ್ನು ಬೇಯಿಸಿ, ಸಿಪ್ಪೆ ಸುಲಿದು ಸರಿಯಾಗಿ ಪುಡಿಮಾಡಿಕೊಳ್ಳಿ. ಹಸಿಮೆಣಸಿನ ಕಾಯಿಯನ್ನು ಸಣ್ಣದಾಗಿ ಹೆಚ್ಚಿಕೊಂಡು, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಈರುಳ್ಳಿ, ಉಪ್ಪು ಸೇರಿಸಿಕೊಳ್ಳಿ. ಎರಡು ಬ್ರೆಡ್‌ಗಳನ್ನು ನೀರಿನಲ್ಲಿ ಅದ್ದು ಹಿಂಡಿ ತೆಗಿಯಿರಿ. ಇವೆಲ್ಲವನ್ನು ಒಟ್ಟಿಗೆ ಸೇರಿಸಿ ಸರಿಯಾಗಿ ಕಲೆಸಿಕೊಳ್ಳಿ. ಈ ಮಿಶ್ರಣವನ್ನು ಸಣ್ಣ ಸಣ್ಣ ಉಂಡೆಮಾಡಿ ವಡೆಯಂತೆ ತಟ್ಟಿ. ಎಣ್ಣೆ ಕಾಯಲಿಟ್ಟು, ಸರಿಯಾದ ಕಾದ ನಂತರ ಎಣ್ಣೆಯಲ್ಲಿ ಕರಿಯಿರಿ. ಬಿಸಿ ಬಿಸಿ ಬಾಳೇಕಾಯಿ ವಡೆ ಸೂಪರ್ ಟೇಸ್ಟಿ.