ಸಾಮಾಗ್ರಿಗಳು
ಪುದೀನಾ
ಈರುಳ್ಳಿ
ಚಿಕನ್
ಮೆಂತ್ಯೆ ಸೊಪ್ಪು
ಚಕ್ಕೆ
ಲವಂಗ
ಹಸಿಮೆಣಸು
ಕೊತ್ತಂಬರಿ
ಶುಂಠಿ ಬೆಳ್ಳುಳ್ಳಿ
ಅಕ್ಕಿ
ತುಪ್ಪ
ಎಣ್ಣೆ
ಮಾಡುವ ವಿಧಾನ
ಮೊದಲು ಕುಕ್ಕರ್ಗೆ ಎಣ್ಣೆ, ತುಪ್ಪ, ಸಾಸಿವೆ, ಜೀರಿಗೆ, ಚಕ್ಕೆ,ಲವಂಗ ಹಾಕಿ
ನಂತರ ಅದಕ್ಕೆ ಗೋಡಂಬಿ, ಈರುಳ್ಳಿ ಹಾಕಿ ಬಾಡಿಸಿ
ನಂತರ ಅದಕ್ಕೆ ಚಿಕನ್ ಪೀಸ್ ಹಾಕಿ ಬೇಯಿಸಿ
ಉಪ್ಪು ಹಾಕಿ, ನಂತರ ಮಿಕ್ಸಿಗೆ ಹಸಿಮೆಣಸು, ಶುಂಠಿ, ಬೆಳ್ಳುಳ್ಳಿ, ಕೊತ್ತಂಬರಿ, ಪುದೀನಾ ಹಾಕಿ ರುಬ್ಬಿಕೊಳ್ಳಿ
ರುಬ್ಬಿದ ಮಿಶ್ರಣವನ್ನು ಚಿಕನ್ಗೆ ಹಾಕಿ ಎಣ್ಣೆ ಬಿಡುವವೆರೆಗೂ ಬಾಡಿಸಿ
ನಂತರ ರೈಸ್, ಗರಂ ಮಸಾಲಾ ಬಿರಿಯಾನಿ ಮಸಾಲಾ ಬೇಕಿದ್ದಲ್ಲಿ ಹಾಕಿ
ಬಾಡಿಸಿ ನೀರು ಹಾಕಿ ವಿಶಲ್ ಹಾಕಿ
ಎರಡು ವಿಶಲ್ ನಂತರ ಪಲಾವ್ ರೆಡಿ