ಪ್ರಧಾನಿ ಮೋದಿ ಡೈ ಹಾರ್ಡ್‌ ಫ್ಯಾನ್‌: ರಕ್ತದಲ್ಲೇ ಚಿತ್ರ ಬಿಡಿಸಿದ ಕಲಾವಿದ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಭಿಮಾನಿಯೊಬ್ಬರು ವಿಭಿನ್ನ ಉಡುಗೊರೆಯೊಂದನ್ನು ತಯಾರಿಸಿದ್ದಾರೆ.

ಬಾಗಲಕೋಟೆ ಜಿಲ್ಲೆ ಜಮಖಂಡಿ ಮೂಲದ ಅಭಿಮಾನಿ ಆನಂದ ಭಾರತ, ಮೋದಿಗಾಗಿ ತನ್ನದೇ ರಕ್ತದಲ್ಲಿ ಚಿತ್ರವೊಂದನ್ನು ಬಿಡಿಸಿದ್ದಾರೆ.

ಮೋದಿ ತಾಯಿ ಹೀರಾಬೆನ್ ಆಶೀರ್ವಾದ ಮಾಡಿರುವ ಚಿತ್ರವನ್ನು ತನ್ನ ರಕ್ತದಲ್ಲಿ ಬಿಡಿಸಿದ್ದಾರೆ. ಕೇವಲ 13 ಗಂಟೆಗಳಲ್ಲೇ ಮೋದಿ ಹಾಗೂ ತಾಯಿ ಹೀರಾಬೆನ್ ಇರುವ ಭಾವಚಿತ್ರವನ್ನು ತನ್ನ ರಕ್ತದಲ್ಲೇ ಬಿಡಿಸಿದ್ದಾರೆ. ಇದನ್ನು ಇಂದು ಪ್ರಧಾನಿ ಮೋದಿಗೆ ನೀಡಿ, ಅವರ ರಿಯಾಕ್ಷನ್‌ಗಾಗಿ ಉತ್ಸುಕರಾಗಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!