ಇನ್ನು ಪೇಟಿಎಂ ನಲ್ಲಿ ಮೊಬೈಲ್‌ ರೀಚಾರ್ಜ್‌ ಮಾಡುವ ಮುನ್ನ ನಿಮಗಿದು ತಿಳಿದಿರಲಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ನೀವು ಪೇಟಿಎಂ ಮೂಲಕ ಮೊಬೈಲ್‌ ರೀಚಾರ್ಜ್‌ ಮಾಡುತ್ತಿದ್ದರೆ ಈ ವಿಷಯವನ್ನು ನೀವು ತಿಳಿದುಕೊಳ್ಳಲೇ ಬೇಕು.

ಜನಪ್ರಿಯ ಪೇಮೆಂಟ್‌ ಅಪ್ಲಿಕೇಷನ್‌ ಪೇಟಿಎಂ ತನ್ನ ಕೆಲವು ಬಳಕೆದಾರರಿಗೆ ಮೊಬೈಲ್‌ ರೀಚಾರ್ಜ್ ಗಳಿಗೆ ಸಣ್ಣ ಪ್ರಮಾಣದ ಶುಲ್ಕ ವಿಧಿಸಲು ಪ್ರಾರಂಭಿಸಿದ ಎನ್ನಲಾಗಿದೆ. ಯುಪಿಐ ಅಥವಾ ಬ್ಯಾಂಕ್ ಕ್ರೆಡಿಟ್/ಡೆಬಿಟ್ ಕಾರ್ಡ್ ಮೂಲಕ ಪಾವತಿಸಿದ ಮೊತ್ತಕ್ಕೆ ಅಲ್ಪಪ್ರಮಾಣದಲ್ಲಿ ಶುಲ್ಕ ವಿಧಿಸಲಾಗುತ್ತಿದೆ. ರೀಚಾರ್ಜ್‌ ಮೊತ್ತದ ಆಧಾರದ ಮೇಲೆ 1 ರಿಂದ 6 ರೂಪಾಯಿಯವರೆಗೂ ಶುಲ್ಕವಿಧಿಸಲಾಗುತ್ತದೆ ಎನ್ನಲಾಗಿದೆ.

ಎಲ್ಲಾ ಬಳಕೆದಾರರಿಗೂ ಇದು ಅನ್ವಯವಾಗುದಿಲ್ಲ. ಆದರೆ ಹೆಚ್ಚು ಪೇಟಿಎಂ ಬಳಸುವವರಿಗೆ ಮಾರ್ಚ್‌ ತಿಂಗಳ ನಂತರ 100 ರೂ. ಹಾಗು ಅದಕ್ಕಿಂತ ಹೆಚ್ಚಿನ ವಹಿವಾಟಿನ ಮೇಲೆ ಶುಲ್ಕ ವಿಧಿಸಿರುವುದನ್ನು ಕೆಲವು ಬಳಕೆದಾರರು ಗುರುತಿಸಿದ್ದಾರೆ ಎಂದು ಮೂಲಗಳ ವರದಿ ಹೇಳಿದೆ. ಈ ಹಿಂದೆ ಪೇಟಿಎಂ  2019ರಲ್ಲಿ ತನ್ನ ಬಳಕೆದಾರರಿಗೆ ಯಾವುದೇ ರೀತಿಯ ವಹಿವಾಟಿನ ಶುಲ್ಕವನ್ನು ವಿಧಿಸುವುದಿಲ್ಲ ಎಂದಿತ್ತು. ಆದರೀಗ ಈ ಮಾತು ಬದಲಾದಂತೆ ತೋರುತ್ತಿದೆ.

ಇನ್ನೊಂದು ಜನಪ್ರಿಯ ಪಾವತಿ ಅಪ್ಲಿಕೇಷನ್‌ ಫೋನ್‌ ಪೇ ಕೂಡ ಅಕ್ಟೋಬರ್ ನಲ್ಲಿ 50ರೂ. ಗಿಂತ ಹೆಚ್ಚಿನ ರೀಚಾರ್ಜ್‌ ಮೇಲೆ ಪ್ರೊಸೆಸಿಂಗ್‌ ಫೀ ವಿಧಿಸಿಲು ಪ್ರಾರಂಭಿಸಿತ್ತು. ಈ ಕುರಿತು ಹಲವು ಬಳಕೆದಾರರು ಸಾಮಾಜಿಕವಾಗಿ ರಿಪೋರ್ಟ್‌ ಮಾಡಿದ್ದರು. ಪ್ರಸ್ತುತ ಪೇಟಿಎಂ ಕೂಡ ಶುಲ್ಕ ವಿಧಿಸುತ್ತದೆ ಎಂದು ವರದಿಯಾದ್ದು ಯಾವ ಆಧಾರದ ಮೇಲೆ ಶುಲ್ಕ ಸಂಗ್ರಹಿಸಲಾಗುತ್ತದೆ ಎಂಬುದನ್ನು ಇನ್ನೂ ಬಹಿರಂಗಪಡಿಸಿಲ್ಲ.

ಈ ಶುಲ್ಕವನ್ನು ತಪ್ಪಿಸಿಕೊಳ್ಳಲು ಅನೇಕ ಗ್ರಾಹಕರು ಪರ್ಯಾಯ ವಿಧಾನಗಳಾದ ಗೂಗಲ್‌ ಪೇ, ಅಮೇಜಾನ್‌ ಪೇ ಗಳ ಮೊರೆ ಹೋಗುತ್ತಿದ್ದಾರೆ. ಅಲ್ಲದೇ ಏರ್‌ಟೆಲ್‌, ಜಿಯೋ, ವಾಟ್ಸಾಪ್‌ ಗಳು ಇನ್‌ ಬಿಲ್ಟ್‌ ಪೇಮೆಂಟ್‌ ಆಪ್ಶನ್‌ ಜಾರಿಗೆ ತರುತ್ತಿದ್ದು ಇವು UPI ಸೇರಿದಂತೆ ಎಲ್ಲಾ ಪಾವತಿ ವಿಧಾನವನ್ನು ಒಳಗೊಂಡಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!