ಪ್ರಖ್ಯಾತ ಗಾಯಕ ಜಸ್ಟಿನ್‌ ಬೀಬರ್ ಗೆ ಪಾರ್ಶ್ವವಾಯು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
‘ಬೇಬಿʼ, ಪೀಚಸ್‌, ಸ್ಟೇಯ್‌, ಮುಂತಾದ ಹಾಡುಗಳ ಮೂಲಕ ಪ್ರಸಿದ್ಧವಾಗಿದ್ದ ಕೆನೆಡಿಯನ್‌ ಸಿಂಗರ್‌ ಜಸ್ಟಿನ್‌ ಬೀಬರ್ ಮುಖದ ಪಾರ್ಶ್ವವಾಯುವಿಗೆ ತುತ್ತಾಗಿದ್ದಾರೆ.

ಹೌದು, ಈ ಕುರಿತು ಸ್ವತಃ ಜಸ್ಟೀನ್‌ ಬೈಬರ್‌ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದು ತಾನು ರಾಮ್ಸೆ ಹಂಟ್ ಸಿಂಡ್ರೋಮ್ ಎಂಬ ಅಪರೂಪದ ಖಾಯಿಲೆಗೆ ತುತ್ತಾಗಿರುವುದಾಗಿ ಹೇಳಿದ್ದಾರೆ. ಇದರಿಂದಾಗಿ ಅವರ ಮುಖದ ಬಲಭಾಗವು ಪಾರ್ಶ್ವವಾಯುವಿಗೆ ಒಳಗಾಗಿದೆ.

ಮೇಯೊ ಕ್ಲಿನಿಕ್ ಪ್ರಕಾರ, ರಾಮ್ಸೆ ಹಂಟ್ ಸಿಂಡ್ರೋಮ್ ಮುಖದ ನರಗಳ ಮೇಲೆ ದಾಳಿ ಮಾಡುತ್ತದೆ ಎನ್ನಲಾಗಿದ್ದು ಸಿಡುಬು (ಚಿಕನ್‌ ಫಾಕ್ಸ್) ರೋಗಕ್ಕೆ ಕಾರಣವಾಗುವ ವೈರಸ್‌ ನಿಂದಲೇ ಈ ರೋಗವೂ ಉಂಟಾಗುತ್ತದೆ ಎನ್ನಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!