ಹೊಸದಿಗಂತ ಡಿಜಿಟಲ್ ಡೆಸ್ಕ್:
ಪೊಂಗಲ್ ಸಂಕ್ರಾಂತಿಯಲ್ಲಿ ದಕ್ಷಿಣ ಭಾರತದಲ್ಲಿ ತಯಾರಿಸಲಾಗುವ ವಿಶೇಷ ಆಹಾರ. ಈ ಆಹಾರದಲ್ಲಿ ಬೇಳೆ, ಬೆಲ್ಲ, ಸಿಹಿ ಪೊಂಗಲ್ ಮತ್ತು ಉತ್ತಮ ಅನ್ನ ಒಂದೇ ಸಮನಾಗಿ ಬೆರೆಯಲ್ಪಡುತ್ತದೆ. ಸ್ವೀಟ್ ಪೊಂಗಲ್ ತಯಾರಿಸುವ ವಿಧಾನವನ್ನು ತಿಳಿಸಿಕೊಡುತ್ತೇವೆ. ಹೀಗೆಂದರೆ, ನೀವು ಯಾವ ರೀತಿ ತಯಾರಿಸಬೇಕು ಎಂಬುದನ್ನು ತಿಳಿದುಕೊಳ್ಳಿ..
ಬೇಕಾಗುವ ಸಾಮಗ್ರಿಗಳು:
ಹೆಸರುಬೇಳೆ- 1 ಕಪ್
ಅಕ್ಕಿ – 1 ಕಪ್
ಪುಡಿ ಮಾಡಿದ ಬೆಲ್ಲ/ ಸಕ್ಕರೆ – 1 ಕಪ್
ಏಲಕ್ಕಿ – 4
ದ್ರಾಕ್ಷಿ, ಗೋಡಂಬಿ – 50 ಗ್ರಾಂ
ತುಪ್ಪ – 4 ಚಮಚ
ಮಾಡುವ ವಿಧಾನ:
ಮೊದಲಿಗೆ ಬಾಣಲೆಯಲ್ಲಿ ಹೆಸರುಬೇಳೆಯನ್ನು ಹಾಕಿ ಅದು ಕೆಂಪಾಗುವ ತನಕ ಉರಿಯಲ್ಲಿ ಹುರಿಯಿರಿ. ಈಗ ಕುಕ್ಕರ್‌ನಲ್ಲಿ ತೊಳೆದ ಅಕ್ಕಿ ಮತ್ತು ಹುರಿದ ಹೆಸರುಬೇಳೆಯನ್ನು 4 ಕಪ್ ನೀರಿನಲ್ಲಿ ಒಂದು ವಿಷಲ್ ಬರುವ ತನಕ ಬೇಯಿಸಿ. ಮತ್ತೊಂದು ಪ್ಯಾನ್‌ನಲ್ಲಿ ಪುಡಿಮಾಡಿದ ಬೆಲ್ಲವನ್ನು ಕರಗಿಸಿ ಕಲ್ಮಶವಿದ್ದರೆ ಒಮ್ಮೆ ಶೋಧಿಸಿಕೊಳ್ಳಿ. ಈಗ ಬೆಂದ ಅಕ್ಕಿ ಮತ್ತು ಬೇಳೆಗೆ ಬೆಲ್ಲದ ಪಾಕವನ್ನು ಹಾಕಿ ಚೆನ್ನಾಗಿ ತಿರುವಿ. ನಂತರ ಪುಡಿ ಮಾಡಿದ ಏಲಕ್ಕಿ, ತುಪ್ಪದಲ್ಲಿ ಕರಿದ ದ್ರಾಕ್ಷಿ ಗೋಡಂಬಿ ಹಾಕಿ ಒಲೆಯಿಂದ ಇಳಿಸಿ. ಬೇಕಾದಲ್ಲಿ ಸ್ವಲ್ಪ ಪಚ್ಚ ಕರ್ಪೂರ ಮತ್ತು ಒಂದು ಚಿಟಿಕೆ ಲವಂಗದ ಪುಡಿಯನ್ನು ಸೇರಿಸಬಹುದು. ಈಗ ಸ್ವೀಟ್ ಪೊಂಗಲ್ ಸವಿಯಲು ಸಿದ್ಧ.