‘ಮಾಲ್ಡೀವ್ಸ್’ ನೆನಪಿಸಿದ ಮಲಾಡ್: ‘ಮಹಾ’ ಮಳೆಗೆ ರಸ್ತೆಯಲ್ಲಿ ಮಲಗಿ ಹೊರಳಾಡಿದ ಭೂಪ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

‘ಮಹಾ’ ಮಳೆಗೆ ಮುಂಬೈ ಜನತೆ ತತ್ತರಿಸಿದ್ದು, ರಸ್ತೆಗಳು ಜಲಾವೃತವಾಗಿದ್ದು, ಸಂಚಾರ ಸ್ಥಗಿತಗೊಂಡಿದೆ.ಇದರ ನಡುವೆ ಇಲ್ಲಿ ಒಬ್ಬಮಳೆ ನೀರಿನಲ್ಲಿ ಹೊರಳಾಡಿದ್ದಾನೆ.
ಹೌದು, ಆತ ನೀರು ನಿಂತ ರಸ್ತೆಯಲ್ಲಿ ಹೊರಳಾಡುತ್ತಾ ಎಂಜಾಯ್ ಮಾಡುತ್ತಿರುವ ವಿಡಿಯೋಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ.
ಒಂದೆಡೆ ಬಸ್ವಾ ಹನಗಳು ನೀರಿನಲ್ಲೇ ಸಂಚರಿಸುತ್ತಿವೆ. ಇನ್ನೊಂದೆಡೆ ಇತ್ತಮಲಗಿದ್ದು, ಈತನ ಮೇಲೆ ನೀರು ಚಿಮ್ಮುವುದನ್ನ ಕಾಣಬಹುದು. ಆದರೆ ಇದಕ್ಕೆಲ್ಲಾ ಕ್ಯಾರೇ ಎನ್ನದೇ ತನ್ನದೇ ಲೋಕದಲ್ಲಿ ಮುಳುಗಿದ್ದಾನೆ. ಇದು ಮದ್ಯದ ಅಮಲಿನ ಕರಾಮತ್ತು ಎಂದು ಹೇಳಲಾಗುತ್ತಿದೆ.

ಈ ಕುರಿತು ವಿಡಿಯೋಗಳು ಶೇರ್ ಆಗುತ್ತಿದ್ದು,ಬಿಎಂಸಿ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ‘ಧನ್ಯವಾದಗಳು ಬಿಎಂಸಿ, ಈ ವ್ಯಕ್ತಿಯನ್ನು ಮಲಾಡ್​ನಲ್ಲಿ ಮಾಲ್ಡೀವ್ಸ್ ಎಂದು ಭಾವಿಸಿದ್ದಕ್ಕಾಗಿ ಎಂದು ಶೀರ್ಷಿಕೆ ಬರೆದಿದ್ದಾರೆ.
ಇನ್ನೊಬ್ಬ ವಿಡಿಯೋವನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡು, ‘ಈ ವ್ಯಕ್ತಿ ಮಲಾಡ್​ನಲ್ಲಿ ಮಾಲ್ಡೀವ್ಸ್ ಅನ್ನು ಅನುಭವಿಸುತ್ತಿದ್ದಾರೆ ಎಂದು ಹೇಳಿ ಹಿಂದಿ ಸಾಂಗ್​ನ ಲೈನ್ ಒಂದನ್ನು ಬರೆದುಕೊಂಡಿದ್ದಾರೆ’.
ಮುಂಬೈನಲ್ಲಿ ಭಾರಿ ಮಳೆಯಾಗುತ್ತಿದ್ದು,ರೆಡ್ ಅಲರ್ಟ್ ಘೋಷಿಸಿದ್ದು, ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಮಳೆಯಾಗುವ ನಿರೀಕ್ಷೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!