ಪಿಲಿಕುಳ ನಿಸರ್ಗಧಾಮದಲ್ಲಿ ‘ನಾಗಿಣಿ’ ಗೆ ಈಗ ಬಾಣಂತನದ ಸಂಭ್ರಮ!

ಹೊಸದಿಗಂತ ವರದಿ, ಮಂಗಳೂರು:

ಇಲ್ಲಿನ ಪಿಲಿಕುಳ ಮೃಗಾಲಯಕ್ಕೆ ಹೊಸ ಅತಿಥಿಗಳ ಆಗಮನವಾಗಿದೆ. 8 ವರ್ಷ ಪ್ರಾಯದ `ನಾಗಿಣಿ’ ಹೆಸರಿನ ಕಾಳಿಂಗ ಸರ್ಪವು 31ಮರಿಗಳಿಗೆ ಜನ್ಮ ನೀಡಿದೆ!
ನಾಗಿನಿ ಒಟ್ಟು 38  ಮೊಟ್ಟೆಗಳನ್ನು ಇಟ್ಟಿದ್ದು, ಅದನ್ನು ಮೃಗಾಲಯದ ಅಧಿಕಾರಿಗಳು ಪ್ರಯೋಗಾಲಯದಲ್ಲಿರಿಸಿ ಕೃತಕ ಕಾವು ನೀಡುವ ವ್ಯವಸ್ಥೆಯನ್ನು ಮಾಡಿದ್ದರು. 76 ದಿನಗಳ ನಂತರ 31 ಮರಿಗಳು ಮೊಟ್ಟೆಯೊಡೆದು ಹೊರಬಂದಿವೆ.
ವಿಷಪೂರಿತವಾದ ಈ ಮರಿಗಳು ಸುಮಾರು ಒಂದುವರೆ ಅಡಿ ಉದ್ದವಿದೆ.


2010-2011ರ ಸಾಲಿನಲ್ಲಿ ಪಿಲಿಕುಳ ಜೈವಿಕ ಉದ್ಯಾನವನದಲ್ಲಿ ವಿಶ್ವದಲ್ಲೇ ಪ್ರಥಮ ಬಾರಿಗೆ ಅಸಾಧ್ಯವೆಂದು ಪರಿಗಣಿಸಲಾಗಿದ್ದ ಸಂರಕ್ಷಿತ ಪರಿಸರದಲ್ಲಿನ ಕಾಳಿಂಗಸರ್ಪಗಳ ಸಂತಾನೋತ್ಪತ್ತಿ ಮಾಡಿ ದಾಖಲೆ ನಿರ್ಮಿಸಿತ್ತು. ಪ್ರಸ್ತುತ ಮರಿಗಳು ಮೃಗಾಲಯದಲ್ಲಿದ್ದು, ಅವು ಬೆಳೆದ ನಂತರ ಅವುಗಳನ್ನು ಜನವಸತಿ ಇಲ್ಲದ ಕಾಡಿನ ಪ್ರದೇಶದಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಪಿಲಿಕುಳ ಜೈವಿಕ ಉದ್ಯಾನವನದ ನಿರ್ದೇಶಕ ಎಚ್.ಜಯಪ್ರಕಾಶ್ ಭಂಡಾರಿ ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!