ಈಗ ವಸ್ತ್ರಸ್ವಾತಂತ್ರ್ಯದ ಹೆಸರಲ್ಲಿ ಹಿಜಾಬ್ ಬೆಂಬಲಿಸುತ್ತಿರುವ ಮಲಾಲಾ ಅವತ್ತು ಬುರ್ಖಾವನ್ನು ವಿರೋಧಿಸಿದ್ದರು

ಹೊಸದಿಗಂತ ಡಿಜಿಟಲ್ ಡೆಸ್ಕ್:

“ಬಟ್ಟೆ ಹೆಚ್ಚು ಹಾಕಿದ್ದಾರೋ, ಕಮ್ಮಿ ಹಾಕಿದ್ದಾರೋ ಎಂಬುದರ ಮೇಲೆ ಹೆಣ್ಣನ್ನು ವಸ್ತುವಿನಂತೆ ನೋಡುವ ಪ್ರಕ್ರಿಯೆ ಈಗಲೂ ಜಾರಿಯಲ್ಲಿದೆ. ಇವರು ಹಿಜಾಬ್ ಮತ್ತು ಶಿಕ್ಷಣದ ನಡುವೆ ಒಂದನ್ನು ಆಯ್ಕೆ ಮಾಡಿಕೊಳ್ಳುವಂತೆ ಒತ್ತಡ ಹೇರುತ್ತಿದ್ದಾರೆ” ಎಂಬುದು ನೊಬೆಲ್ ಪ್ರಶಸ್ತಿ ವಿಜೇತೆ ಮಲಾಲಾ ಯೂಸುಫ್ ಝಾಯಿ ಕರ್ನಾಟಕದ ಹಿಜಾಬ್ ಪ್ರಕರಣಕ್ಕೆ ಪ್ರತಿಕ್ರಿಯಿಸಿರುವ ರೀತಿ.

ಹೀಗೆ ಹಿಜಾಬ್ ಧಾರಣೆ ಎಂಬುದು ವ್ಯಕ್ತಿಸ್ವಾತಂತ್ರ್ಯ ಎಂದು ಪ್ರತಿಪಾದಿಸುತ್ತಿರುವ ಇದೇ ಮಲಾಲಾ, ಈ ಹಿಂದೆ ಬುರ್ಖಾ ಧಾರಣೆ ವಿರೋಧಿಸಿ ತಮ್ಮದೇ ಪುಸ್ತಕದಲ್ಲಿ ಅಭಿಪ್ರಾಯ ದಾಖಲಿಸಿದ್ದರು. ಇದೀಗ ನೆಟ್ಟಿಗರು ಅದನ್ನೆತ್ತಿಕೊಂಡು ಮಲಾಲಾಳ ಇಬ್ಬಂದಿತನ ಮತ್ತು ಬೂಟಾಟಿಕೆಗಳನ್ನು ಪ್ರಶ್ನಿಸುತ್ತಿದ್ದಾರೆ.

“ಇವರು ಮಹಿಳೆಯರು ಬುರ್ಖಾ ಧರಿಸುವಂತೆ ಒತ್ತಾಯಿಸುತ್ತಿದ್ದರು. ಬುರ್ಖಾ ಧರಿಸುವುದು ಎಂದರೆ ಒಂದೇ ಕಿಂಡಿ ಇರುವ ಬಟ್ಟೆಯ ದೊಡ್ಡ ಶೆಟಲ್‌ಕಾಕ್‌ನೊಳಗೆ ನಡೆದಾಡುವಂತೆ ಇರುತ್ತದೆ. ಇನ್ನು ಬೇಸಿಗೆ ದಿನಗಳಲ್ಲಿ ಬುರ್ಖಾ ಒಲೆಯ ರೀತಿ ಅನಿಸುತ್ತದೆ. ಸದ್ಯ ನಾನು ಅದನ್ನು ಧರಿಸಬೇಕಿಲ್ಲ” ಎಂದು ಮಲಾಲಾ ತಮ್ಮ ಪುಸ್ತಕದಲ್ಲಿ ಹೇಳಿದ್ದಾರೆ.

ಹಾಗಾದರೆ ಹಿಜಾಬ್ ಅವರವರ ಆಯ್ಕೆ ಎಂದಾದರೆ ಅದೇ ವಾದವನ್ನು ಬುರ್ಖಾಗೆ ವಿಸ್ತರಿಸಬಹುದಲ್ಲ ಎಂಬ ಪ್ರಶ್ನೆ ಈಗ ಎದ್ದಿದೆ.​

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!