ತಮಗಿರುವ ‘ADHD’ ನ್ಯೂನತೆ ಬಗ್ಗೆ ಹೇಳಿಕೊಂಡ ಮಲಯಾಳಂ ನಟ ಫಹಾದ್ ಫಾಸಿಲ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಮಲಯಾಳಂ ನಟ ಫಹಾದ್‌ ಫಾಸಿಲ್ (Fahadh Fasil) ಸಂದರ್ಶನವೊಂದರಲ್ಲಿ ತಮಗಿರುವ ವಿಚಿತ್ರ ಕಾಯಿಲೆ ಬಗ್ಗೆ ಮಾತನಾಡಿದ್ದಾರೆ.

ಇತ್ತೀಚಿಗೆ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಕುತೂಹಲಕಾರಿ ವಿಚಾರದ ಕುರಿತು ಮಾತನಾಡಿದ ಅವರು, ADHD (ಅಟೆನ್ಷನ್‌ ಡಿಫಿಸಿಟ್‌ ಹೈಪರ್‌ಆಕ್ಟಿವಿಟಿ ಡಿಸಾರ್ಡರ್‌) ಅನ್ನೋದು ಈ ಕಾಯಿಲೆಯ ಹೆಸರು. ಇದು ನರಕ್ಕೆ ಸಂಬಂಧಪಟ್ಟಿದ್ದು. ಇದು ಮಿದುಳಿನ ಸಾಮರ್ಥ್ಯವನ್ನು ಕುಗ್ಗಿಸುತ್ತದೆ. ಇದು ಮಕ್ಕಳಲ್ಲಿ ಸಾಮಾನ್ಯ ಸಮಸ್ಯೆ. ಆದರೆ, ದೊಡ್ಡವರಿಗೆ ಈ ರೋಗದಿಂದ ತೊಂದರೆ ಉಂಟಾಗುತ್ತದೆ ಎಂದು ಹೇಳಿದ್ದಾರೆ.

ಕೇರಳದ ಕೋತಮಂಗಲಂನಲ್ಲಿರುವ ವಿಶೇಷ ಮಕ್ಕಳ ಪುನರ್ವಸತಿ ಕುರಿತಾದ ಶಾಲೆಯೊಂದರ ಉದ್ಘಾಟನಾ ಸಮಾರಂಭದಲ್ಲಿ ಅವರು ಈ ವಿಷಯ ಬಹಿರಂಗಗೊಳಿಸಿದ್ದಾರೆ.

ನನಗೆ ಸಿನಿಮಾದಲ್ಲಿ ಡೈಲಾಗ್‌ ಹೇಳುವುದು ಮಾತ್ರ ಗೊತ್ತಿದೆ. ಆದರೆ ಸಾರ್ವಜನಿಕ ಸಮಾರಂಭಗಳಲ್ಲಿ ಹೇಗೆ ಮತ್ತು ಏನು ಮಾತನಾಡಬೇಕು ಎಂಬುದು ಗೊತ್ತಿಲ್ಲ ಎಂದು ನನ್ನ ತಾಯಿ ಮತ್ತು ಪತ್ನಿ ಯಾವಾಗಲೂ ಹೇಳುತ್ತಿರುತ್ತಾರೆ. ನಾನೀಗ ಎಲ್ಲವನ್ನೂ ಬೇಸಿಕ್‌ನಿಂದ ಶುರು ಮಾಡಬೇಕಿದೆ. ವೈದ್ಯರ ಬಳಿ ನನ್ನ ಈ ಸಮಸ್ಯೆ ದೂರವಾಗಬಹುದೇ ಎಂದು ಕೇಳಿದ್ದೆ. ಅದಕ್ಕವರು, ನನ್ನ ಹದಿಹರೆಯದಲ್ಲಿಈ ಸಮಸ್ಯೆ ಇರುವುದು ಪತ್ತೆಯಾಗುತ್ತಿದ್ದರೆ ಅದನ್ನು ಸರಿಹೋಗಿಸಬಹುದಿತ್ತು. ಆದರೆ ನನಗೆ 41ನೇ ವಯಸ್ಸಿನಲ್ಲಿಈ ವಿಷಯ ಗೊತ್ತಾಗಿದೆ. ಇದನ್ನು ಬದಲಾಯಿಸಲು ಸಾಧ್ಯವಿಲ್ಲ ಎಂದರು ಎಂದು ಫಹಾದ್‌ ವಿವರಿಸಿದ್ದಾರೆ.

ಅಂದಹಾಗೆ, ‘ಪುಷ್ಪ 2’ನಲ್ಲಿ (Pushpa 2) ಫಹಾದ್ ಫಾಸಿಲ್ ವಿಲನ್ ಆಗಿ ನಟಿಸಿದ್ದಾರೆ. ಇದರ ಮಲಯಾಳಂ ಹಲವು ಸಿನಿಮಾಗಳು ಅವರ ಕೈಯಲ್ಲಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!