ಮಲಯಾಳಂ ಖ್ಯಾತ ಹಾಸ್ಯ ನಟನ ಕಾರಿಗೆ ಲಾರಿ ಡಿಕ್ಕಿ: ಅಪಾಯದಿಂದ ಪಾರಾದ ಗಿನ್ನೆಸ್ಸ್​ ಪಕ್ರು ಅಭಿಮಾನಿಗಳಿಗೆ ಮಾಡಿದ ಮನವಿ ಏನು?

ಹೊಸ ದಿಗಂತ ಡಿಜಿಟಲ್ ಡೆಸ್ಕ್

ಮಲಯಾಳಂ ಖ್ಯಾತ ಹಾಸ್ಯ ನಟ ಗಿನ್ನೆಸ್ಸ್​ ಪಕ್ರು ಅಲಿಯಾಸ್​ ಅಜಯ್​ ಕುಮಾರ್​ ಅವರ ಕಾರು ಅಪಘಾತಕ್ಕೀಡಾಗಿರುವ ಘಟನೆ ಕೇರಳದ ಥಿರುವಲ್ಲ ಪಟ್ಟಣದಲ್ಲಿ ನಡೆದಿದೆ.
ಥಿರುವಲ್ಲ ಬೈಪಾಸ್​ ರಸ್ತೆಯಲ್ಲಿ ಬರುತ್ತಿದ್ದ ಪಾರ್ಸೆಲ್​ ಲಾರಿಯೊಂದು ಕಾರಿಗೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದ್ದು, ಅದೃಷ್ಟವಶಾತ್​ ನಟ ಗಿನ್ನೆಸ್ಸ್​ ಪಕ್ರು ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಪಕ್ರು ಅವರು ತಿರುವನಂತಪುರದಿಂದ ಕೊಚ್ಚಿಗೆ ತೆರಳು ಮಾರ್ಗ ಮಧ್ಯೆ ಈ ಘಟನೆ ನಡೆದಿದೆ.ಘಟನೆ ಸಂಬಂಧ ಥಿರುವಲ್ಲ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಘಟನೆಯ ಬಗ್ಗೆ ಪಕ್ರು ಅವರು ಫೇಸ್​ಬುಕ್​ ಮೂಲಕ ಪ್ರತಿಕ್ರಿಯೆ ನೀಡಿದ್ದು, ಸೀಟ್​ ಬೆಲ್ಟ್​ ಧರಿಸಿದ್ದರಿಂದ ಪ್ರಾಣ ಉಳಿಯಿತು. ದಯವಿಟ್ಟು ಸೀಟ್​ ಬೆಲ್ಟ್​ ಧರಿಸಿ ಎಂದು ಜನರಲ್ಲಿ ಮನವಿ ಮಾಡಿಕೊಂಡಿದ್ದಾರೆ.ಲಾರಿ ಡಿಕ್ಕಿ ಹೊಡೆದರೂ ಒಂದೇ ಒಂದು ಗಾಯಗಳಾಗದೇ ಪಕ್ರು ಅವರು ಬಚಾವ್​ ಆಗಿದ್ದಾರೆ. ಚಾಲಕ ಶಿವನ್​, ನೆರವಿಗೆ ಬಂದ ಯುವಕರು, ಎಸ್​ಐ ಹುಮಾಯುನ್​, ತಮ್ಮ ಸ್ನೇಹಿತ ಮ್ಯಾಥೀವ್​ ನೈನಾನ್​ ಮತ್ತು ಮುಂತಾದವರಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!