ಹೊಸ ದಿಗಂತ ಡಿಜಿಟಲ್ ಡೆಸ್ಕ್
ಒಂದೇ ಉಸಿರಲ್ಲಿ ಹಾಡುವ ಪರಿಕಲ್ಪನೆಯನ್ನು ಬಾಲಿವುಡ್ ಗೆ ಪರಿಚಯಿಸಿದ ಖ್ಯಾತ ಹಿನ್ನೆಲೆ ಗಾಯಕ ಮತ್ತು ಅತ್ಯುತ್ತಮ ಸಂಗೀತ ಸಂಯೋಜಕ ಶಂಕರ್ ಮಹಾದೇವನ್ ಅವರು ನಮ್ಮೆಲ್ಲರಿಗೂ ಗೊತ್ತೇ ಇದೆ. ಇದೀಗ ಮತ್ತೆ ಶಂಕರ್ ಮಹಾದೇವನ್ ಒಂದೇ ಉಸಿರಲ್ಲಿ ಹನುಮಾನ್ ಚಾಲೀಸಾವನ್ನು ಹಾಡಿದ್ದು, ಅದರ ವೀಡಿಯೊ ಮಂಗಳವಾರ ಬಿಡುಗಡೆಯಾಗಿದೆ.
ಈ ವೀಡಿಯೊದಲ್ಲಿ ಶಂಕರ್ ಮಹಾದೇವನ್ ಅವರು ಅದ್ಭುತವಾದ ಹನುಮಾನ್ ಚಾಲೀಸಾವನ್ನು ಹಾಡುತ್ತಿದ್ದಾರೆ. ಈ ವಿಶಿಷ್ಟವಾದ ಹನುಮಾನ್ ಚಾಲೀಸಾವನ್ನು ಶೇಮರು ಭಕ್ತಿಯ ಯೂಟ್ಯೂಬ್ ಚಾನೆಲ್ನಲ್ಲಿಯೂ ಸಹ ಸ್ಟ್ರೀಮ್ ಮಾಡಲಾಗುತ್ತದೆ.