ವೇದಿಕೆ ಮೇಲೆ ಹಾಡುತ್ತಿರುವಾಗಲೇ ಕುಸಿದು ಬಿದ್ದು ಪ್ರಾಣಬಿಟ್ಟ ಮಳೆಯಾಳಂ ಗಾಯಕ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಮಲಯಾಳಂ ಪ್ರಸಿದ್ಧ ಗಾಯಕ ಎಡವ ಬಶೀರ್ ವೇದಿಕೆ ಮೇಲೆ ಸಂಗೀತ ಕಚೇರಿ ನೀಡುವಾಗಲೇ ಕುಸಿದು ಬಿದ್ದು ಕೊನೆಯುಸಿರೆಳೆದಿದ್ದಾರೆ.
ಕೇರಳದ ಅಲಪ್ಪುಳ ಜಿಲ್ಲೆಯಲ್ಲಿ ಆಯೋಜಿಸಲಾಗಿದ್ದ ಬ್ಲೂ ಡೈಮಂಡ್ಸ್ ಆರ್ಕೆಸ್ಟ್ರಾದ ಗೋಲ್ಡನ್ ಜುಬಿಲಿ ಸಮಾರಂಭದಲ್ಲಿ ಈ ಅವರಘಡ ಸಂಭವಿಸಿದೆ. 1978ರಲ್ಲಿ ಬಿಡುಗಡೆಯಾದ ಹಿಂದಿ ಚಲನಚಿತ್ರ ಟೂಟ್ ಟಾಯ್ಸ್‌ ನಲ್ಲಿ ಖ್ಯಾತ ಗಾಯಕ ಕೆ.ಜೆ.ಜೇಸುದಾಸ್ ಹಾಡಿದ್ದ ಮಾನ್ ಹೋ ತುಮ್ ಬೇಹದ್ ಹಸೀನ್… ಹಾಡನ್ನು ಹಾಡುತ್ತಿದ್ದ ಎಡವ ಬಶೀರ್ ವೇದಿಕೆ ಮೇಲೆಯೇ ಕುಸಿದುಬಿದ್ದಿದ್ದಾರೆ.
ಅದನ್ನು ಗಮನಿಸಿದ ಪ್ರೇಕ್ಷಕರು ತಕ್ಷಣವೇ ಅವರತ್ತ ಓಡಿಬಂದು ಬಶೀರ್ ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಾಕಾರಿಯಾಗದೇ ಸಾವನ್ನಪ್ಪಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಬಶೀರ್ ತಮ್ಮ ಶಾಲಾ ದಿನಗಳಿಂದಲೇ ಸಂಗೀತ ಕ್ಷೇತ್ರದಲ್ಲಿ ತೊಡಗಿಕೊಂಡಿದ್ದರು. ಸಂಗೀತ ಸಾಧನೆಗಾಗಿ ಅವರು ಹಲವಾರು ಪ್ರಶಸ್ತಿಗಳಿಗೆ ಪಾತ್ರರಾಗಿದ್ದಾರೆ. ‘ರಹಮತ್ತುಗಳ ನೀರಂಜೋರು’, ‘ಮಂಜನಿಂಜಿಮನೆ’, ‘ಮರುಭೂಮಿಯಮೀ’ ಮುಂತಾದ ಕೆಲವು ಜನಪ್ರಿಯ ಹಾಡುಗಳಿಗೆ ಅವರು ಧ್ವನಿಯಾಗಿದ್ದರು.
ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಗಾಯಕಿ ಕೆ.ಎಸ್.ಚಿತ್ರಾ ಮೊದಲಾದ ಗಣ್ಯರು ಟ್ವಿಟರ್ ನಲ್ಲಿ ಎಡವ ಬಶೀರ್ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!