Saturday, July 2, 2022

Latest Posts

ಭಾರತದೊಂದಿಗೆ ವ್ಯಾಪಾರ ಪಾಲುದಾರನಾಗಿ ಚೀನಾ ಹಿಂದಿಕ್ಕಿದ ಅಮೆರಿಕಾ..!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಭಾರತದ ಅತಿದೊಡ್ಡ ವ್ಯಾಪಾರ ಪಾಲುದಾರನಾಗಿ ಚೀನಾವನ್ನು, ಯುನೈಟೆಡ್ ಸ್ಟೇಟ್ಸ್  ಹಿಂದಿಕ್ಕಿದೆ. ಇತ್ತೀಚಿನ ವಾಣಿಜ್ಯ ಸಚಿವಾಲಯದ ವರದಿಯ ಪ್ರಕಾರ US ಭಾರತದ ಅತಿದೊಡ್ಡ ವ್ಯಾಪಾರ ಪಾಲುದಾರನಾಗಿ ಮಾರ್ಪಟ್ಟಿದೆ. 2021-22 ಹಣಕಾಸು ವರ್ಷದಲ್ಲಿ US-ಭಾರತದ ವ್ಯಾಪಾರವು $ 119.42 ಶತಕೋಟಿ ಡಾಲರ್ ಎಂದು ಅಂದಾಜಿಸಲಾಗಿದೆ. ಹಿಂದಿನ ವರ್ಷ, 2020-21 ರಲ್ಲಿ ವ್ಯವಹಾರವು ಕೇವಲ $ 80.51 ಶತಕೋಟಿ ಮೌಲ್ಯದ್ದಾಗಿದೆ ಎಂದು ವಾಣಿಜ್ಯ ಇಲಾಖೆ ತಿಳಿಸಿದೆ.

ಇದೀಗ ಕಳೆದ ವರ್ಷ ಉಭಯ ದೇಶಗಳ ನಡುವೆ ಸಾಕಷ್ಟು ವ್ಯಾಪಾರ-ವ್ಯವಹಾರ ನಡೆದಿದೆ. ರಫ್ತು ಮತ್ತು ಆಮದು ಎರಡೂ ಹೆಚ್ಚಾಗಿದೆ. ಯುನೈಟೆಡ್ ಸ್ಟೇಟ್ಸ್‌ಗೆ ಭಾರತದ ರಫ್ತು 2020-21 ರಲ್ಲಿ $ 51.62 ಶತಕೋಟಿಯಿತ್ತು. 2021-22 ರಲ್ಲಿ $ 76.11 ಶತಕೋಟಿ ಏರಿಕೆಯಾಗಿದೆ. ಆಮದು 2020-21 ರಲ್ಲಿ $ 29 ಬಿಲಿಯನ್ ಇದ್ದು, 2021-22 ರಲ್ಲಿ $ 43.31 ಬಿಲಿಯನ್ ಏರಿಕೆಯಾಗಿದೆ.

2021-22ರಲ್ಲಿ ಚೀನಾದೊಂದಿಗಿನ ಭಾರತದ ದ್ವಿಮುಖ ವ್ಯಾಪಾರ ಮೌಲ್ಯವು $ 115.42 ಬಿಲಿಯನ್ ಆಗಿದೆ. ಹಿಂದಿನ ವರ್ಷ ಇದು $ 86.4 ಬಿಲಿಯನ್ ಆಗಿತ್ತು. ಚೀನಾದೊಂದಿಗೆ ನಮ್ಮ ದೇಶದ ವ್ಯಾಪಾರದ ಮೌಲ್ಯವೂ ಹೆಚ್ಚಿದೆ. ಆದರೆ, ಇದು ಅಮೆರಿಕಾದ ವ್ಯವಹಾರವನ್ನು ದಾಟಿಲ್ಲ ಎಂಬುದು ಗಮನಾರ್ಹ. ಮುಂದಿನ ದಿನಗಳಲ್ಲಿ ಭಾರತವು ಅಮೆರಿಕದೊಂದಿಗೆ ಇದೇ ರೀತಿಯ ವ್ಯಾಪಾರ ವಹಿವಾಟು ನಡೆಸಲಿದೆ ಎಂದು ತಜ್ಞರು ಭವಿಷ್ಯ ನುಡಿದಿದ್ದಾರೆ. ಇತ್ತೀಚಿನ ಅಂಕಿಅಂಶಗಳು ಅಮೆರಿಕ ಮತ್ತು ಭಾರತದ ನಡುವಿನ ಆರ್ಥಿಕ ಬಾಂಧವ್ಯವನ್ನು ಬಲಪಡಿಸುವುದಕ್ಕೆ ಸಾಕ್ಷಿಯಾಗಿದೆ ಎಂದಿದ್ದಾರೆ.

“ಭಾರತವು ವಿಶ್ವಾಸಾರ್ಹ ವ್ಯಾಪಾರ ಪಾಲುದಾರನಾಗಿ ಕೆಲಸ ಮಾಡುತ್ತಿದೆ. ಜಗತ್ತು ತನ್ನ ಅಗತ್ಯಗಳಿಗಾಗಿ ಚೀನಾದ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಿ, ಕೆಲ ದೇಶಗಳು ಇದೀಗ ಭಾರತದತ್ತ ಮುಖ ಮಾಡುತ್ತಿವೆ. ಭಾರತವು ಈಗಾಗಲೇ ಇಂಡೋ-ಪೆಸಿಫಿಕ್ ಆರ್ಥಿಕ ಚೌಕಟ್ಟಿನಲ್ಲಿ ಸೇರಿಕೊಂಡಿದೆ. ಈ ನಿರ್ಧಾರದಿಂದ ಹೆಚ್ಚಿನ ವ್ಯಾಪಾರ ಅವಕಾಶಗಳು ಹೆಚ್ಚಲಿವೆ ಎಂದು ಭಾರತೀಯ ರಫ್ತು ಸಂಸ್ಥೆಗಳ ಒಕ್ಕೂಟದ ಉಪಾಧ್ಯಕ್ಷ ಖಾಲಿದ್ ಖಾನ್ ಹೇಳಿದ್ದಾರೆ. ಅಮೆರಿಕಾ ನಂತರ, ಚೀನಾ ಮತ್ತು ಯುಎಇ ಭಾರತದ ಅತಿದೊಡ್ಡ ವ್ಯಾಪಾರ ಪಾಲುದಾರರಾಗಿದ್ದಾರೆ.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss