Saturday, April 1, 2023

Latest Posts

ಮಲೆಯಾಳಿಯ ಕನ್ನಡ ಪ್ರೇಮ: ತೆರೆಯಲ್ಲಿ ಮೂಡಿಬಂತು ಸಿನಿಮಾ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

ಯೆಸ್…ಕೇರಳಿಗರು ಭಾಷಾ ಪ್ರೇಮಿಗಳು. ಸ್ವಂತ ಭಾಷೆ ಬಿಟ್ಟು ಬೇರೆ ಭಾಷೆಯನ್ನು ಕಲಿಯಲೂ ಇಷ್ಟಪಡದಂತಹ ವ್ಯಕ್ತಿಗಳು. ಮಲೆಯಾಳ ಭಾಷೆಯಲ್ಲಷ್ಟೇ ವ್ಯವಹಾರ ನಡೆಸುವವರ ಸಂಖ್ಯೆಯೇ ಅಧಿಕ. ಮಾತೃಭಾಷೆಯನ್ನು ಬಿಟ್ಟು ಕನ್ನಡ ಕಲಿತು ಸಿನೆಮಾ ಮಾಡುವ ಸಾಹಸಕ್ಕೆ ಇಲ್ಲೊಬ್ಬ ಮಲೆಯಾಳಿ ಕೈಯಿಕ್ಕಿದ್ದಾರೆ. ಸಿನೆಮಾವನ್ನು ಯಶಸ್ವಿಯಾಗಿ ಮಾಡಿ ಮುಗಿಸಿ ಥಿಯೇಟರ್‌ನಲ್ಲಿ ರಿಲೀಸ್‌ ಮಾಡಿದ್ದೂ ಆಗಿದೆ.

ಕೇರಳದಿಂದ ಕರ್ನಾಟಕಕ್ಕೆ ಬಂದು ಕನ್ನಡ ಕಲಿತು ಕನ್ನಡ ಸಿನೆಮಾ ಮಾಡಿದ ಸಾಹಸಿಗ ಎಂ.ಎಂ. ಥೋಮಸ್!.‌ ಚಿತ್ರ ಅಧ್ಯಾಪಕ, ಜೊತೆಗೆ ರಬ್ಬರ್‌ ಟ್ಯಾಪಿಂಗ್‌ ಮಾಡುತ್ತಾರೆ. ಸಿನೆಮಾ ಮಾಡಬೇಕೆಂಬ ಕನಸು ಹೊತ್ತು ʻಮಗಳುʼ ಎಂಬ ಕಥೆ ಹೆಣೆದು ಚಿತ್ರ ರಚಿಸಿಯೇ ಬಿಟ್ಟರು. ಹತ್ತಾರು ಕನಸುಗಳನ್ನು ಇಟ್ಟು , ಒಂದಷ್ಟು ಸಂದೇಶಗಳನ್ನು ಹೊತ್ತ ಸಿನೆಮಾ ಮಾಡಿದರು.

ಧರ್ಮಸ್ಥಳದ ಧರ್ಮಾಧಿಕಾರಿಗಳನ್ನೂ ಒಂದು ಸಂದರ್ಭದಲ್ಲಿ ತೆರೆಯ ಮೇಲೆ ತೋರಿಸಿದರು! ಸಮಾಜಕ್ಕೆ ಒಂದು ಸಂದೇಶ ನೀಡುವ ಹಂಬಲ ಹೊತ್ತು ಪ್ರಯತ್ನ ಅದನ್ನು ಕಟ್ಟಿಕೊಡುವ ಪ್ರಯತ್ನ ಮಾಡಿದ್ದಾರೆ. ಮಲೆಯಾಳಿಯ ಕನ್ನಡ ಭಾಷಾ ಪ್ರೇಮಕ್ಕೆ ಭೇಷ್‌ ಎನ್ನಬೇಕು. ಮೊದಲ ಪ್ರಯತ್ನ. ಒಪ್ಪು ತಪ್ಪು ಸಹಜ… ಮಾಡುವ ಧೈರ್ಯ, ಮಾಡಿಯೇ ತೀರುವೆನೆಂಬ ಛಲ ಇವೆಲ್ಲವನ್ನೂ ಮೆಚ್ಚಬೇಕು. ಇದೀಗ ಶುಕ್ರವಾರ ಮಗಳು ತೆರೆಯ ಮೇಲೆ ಬಂದಿದ್ದಾಳೆ. ಕೇರಳಿಗರೂ, ಮಲೆಯಾಳಿಗಳೂ ಈ ಸಿನೆಮಾ ನೋಡಲು ಥಿಯೇಟರ್‌ಗೆ ಹೆಜ್ಜೆ ಹಾಕುತ್ತಿದ್ದಾರೆ!

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!