ಹೊಸದಿಗಂತ ಡಿಜಿಟಲ್ ಡೆಸ್ಕ್:
ಮೇಷ
ದೈಹಿಕ ಶ್ರಮ ಅಧಿಕ. ಅದರಿಂದಾಗಿ ಮಾನಸಿಕ ಒತ್ತಡಕ್ಕೂ ಬಲಿಯಾಗುವಿರಿ. ಆರೋಗ್ಯ ಸುಧಾರಿಸುವುದು. ಕೌಟುಂಬಿಕ ನೆಮ್ಮದಿ.
ವೃಷಭ
ಖಾಸಗಿ ಮತ್ತು ವೃತ್ತಿ ಬದುಕಿನಲ್ಲಿ ಕೆಲವು ಸಮಸ್ಯೆ ಎದುರಿಸುವಿರಿ. ಖರ್ಚು ಮತ್ತು ಉಳಿತಾಯದ ಮಧ್ಯೆ ಸಮತೋಲನ ಸಾಧಿಸಿರಿ. ಆರ್ಥಿಕ ಕೊರತೆ.
ಮಿಥುನ
ವಿಶೇಷಗಳಿಲ್ಲದ ಸಾಮಾನ್ಯ ದಿನ. ಹೊಣೆಗಾರಿಕೆಯನ್ನು ಸಮರ್ಥವಾಗಿ ನಿಭಾಯಿಸಿರಿ. ಅನವಶ್ಯ ಖರ್ಚುಗಳಿಗೆ ನಿಯಂತ್ರಣ ಹಾಕಿರಿ.
ಕಟಕ
ನಿಮ್ಮ ಕಾರ್ಯಕ್ಕೆ ಬೇರೆಯವರನ್ನು ಅವಲಂಬಿಸಬೇಡಿ. ನಿಮ್ಮ ಕೆಲಸವನ್ನು ನೀವೇ ಮಾಡಬೇಕು. ಅದರಿಂದಲೇ ಯಶಸ್ಸು ಸಾಧಿಸುವಿರಿ.
ಸಿಂಹ
ನಿಮ್ಮ ಮುಖ್ಯ ಗುರಿ ಸಾಧಿಸುವ ದಿನ. ಹಣದ ಹೂಡಿಕೆಯಿಂದ ಲಾಭ ದೊರಕಲಿದೆ. ಕೌಟುಂಬಿಕ ಆವಶ್ಯಕತೆ ಪೂರೈಸಲು ಹೆಚ್ಚು ಗಮನ ಕೊಡಿ.
ಕನ್ಯಾ
ಭಾವನಾತ್ಮಕ ನಿಯಂತ್ರಣ ಸಾಧಿಸಿ. ಸಂಬಂಧವು ಕೆಟ್ಟು ಹೋಗಲು ಅವಕಾಶ ಕೊಡಬೇಡಿ. ಕುಟುಂಬ ಸ್ಥರ ಜತೆ ವಾಗ್ವಾದಕ್ಕೆ ಹೋಗಬೇಡಿ.
ತುಲಾ
ತಪ್ಪು ಕಲ್ಪನೆಯಿಂದಾಗಿ ಆಪ್ತರ ಜತೆ ಭಿನ್ನಮತ ಉಂಟಾಗಬಹುದು. ಆರ್ಥಿಕ ಸಮಸ್ಯೆಯು ಮನಸ್ಸಿನ ನೆಮ್ಮದಿ ಕದಡುತ್ತದೆ. ನಿಮಗೆ ಪೂರಕವಲ್ಲದ ದಿನ.
ವೃಶ್ಚಿಕ
ವೃತ್ತಿಯಲ್ಲಿ ಉತ್ತಮ ನಿರ್ವಹಣೆ ತೋರುವಿರಿ. ಹಿಂದೆ ಮಾಡಿದ ಹಣದ ಹೂಡಿಕೆಯು ಫಲ ನೀಡಬಹುದು. ವೈಯಕ್ತಿಕ ಬದುಕಿನಲ್ಲಿ ಪೂರಕ ಬೆಳವಣಿಗೆ.
ಧನು
ನಿಮ್ಮ ಅಹಂ ಸ್ವಭಾವವು ಇತರರ ಜತೆಗಿನ ಬಾಂಧವ್ಯ ಕೆಡಲು ಕಾರಣವಾಗಬಹುದು. ವಿನಯವಂತಿಕೆ ಬೆಳೆಸಿಕೊಳ್ಳಿ. ಇತರರ ಕೆಲಸ ಗುರುತಿಸಿ.
ಮಕರ
ವೃತ್ತಿಯಲ್ಲಿ ಹೆಚ್ಚಿನ ಹೊಣೆಗಾರಿಕೆ. ಯಾರದೋ ಮಾತು ಅಥವಾ ವರ್ತನೆ ನಿಮ್ಮ ಮನಸ್ಸು ಕೆಡಿಸಬಹುದು. ತಪ್ಪು ಸಮರ್ಥಿಸುವ ಪ್ರಯತ್ನ ಮಾಡಬೇಡಿ.
ಕುಂಭ
ಆರ್ಥಿಕ ಪರಿಸ್ಥಿತಿಯನ್ನು ಸರಿಯಾಗಿ ನಿಭಾಯಿಸಿ. ಹಣದ ಹರಿವು ಕಡಿಮೆಯಾಗಲಿದೆ. ಹೊಟ್ಟೆಯ ಸಮಸ್ಯೆ ಉಂಟಾದೀತು. ಆಹಾರ ಹಿತಮಿತವಾಗಿರಲಿ.
ಮೀನ
ಆಪ್ತರೊಂದಿಗೆ ಸಂಬಂಧ ಕೆಟ್ಟಿದ್ದರೆ ಅದು ಸುಧಾರಿಸಲು ತೊಡಗುವುದು. ಉದ್ಯೋಗ ಬದಲಾವಣೆ ಸಾಧ್ಯತೆ. ಆರ್ಥಿಕ ಲಾಭ.