Monday, October 3, 2022

Latest Posts

ಮಲೆ ಮಹದೇಶ್ವರ ಸ್ವಾಮಿ ದೇವಾಲಯದ ಫೇಸ್‌ಬುಕ್ ಖಾತೆ ಹ್ಯಾಕ್: ಅಶ್ಲೀಲ ವಿಡಿಯೋ ಪೋಸ್ಟ್

ಹೊಸದಿಗಂತ ಡಿಜಿಟಲ್ ಡೆಸ್ಕ್: 

ಕಿಡಿಗೇಡಿಗಳು ಮಲೆ ಮಹದೇಶ್ವರ ಸ್ವಾಮಿ ಹೆಸರಿನ ಫೇಸ್‌ಬುಕ್ ಪೇಜ್ ಹ್ಯಾಕ್ ಮಾಡಿದ್ದು, ಅಶ್ಲೀಲ ವಿಡಿಯೋಗಳನ್ನು ಪೋಸ್ಟ್ ಮಾಡಿದ್ದಾರೆ.
ಈ ಪೇಜ್‌ಗೆ 17 ಸಾವಿರಕ್ಕೂ ಹೆಚ್ಚು ಮಂದಿ ಫಾಲೋವರ‍್ಸ್ ಇದ್ದು, ಭಕ್ತರ ಭಾವನೆಗೆ ಧಕ್ಕೆ ಉಂಟಾಗಿದೆ.
ನಿತ್ಯವೂ ಈ ಪೇಜ್‌ನಲ್ಲಿ ದೇವರ ದರ್ಶನ, ಆರತಿ, ಸಮಾಜ ಸೇವೆ ಕುರಿತಾದ ಪೋಸ್ಟ್‌ಗಳು ಇರುತ್ತಿದ್ದವು, ಹ್ಯಾಕ್ ಆದ ನಂತರ ಸ್ಟೋರಿಯಲ್ಲಿ ಅಶ್ಲೀಲ ವಿಡಿಯೋಗಳನ್ನು ಪೋಸ್ಟ್ ಮಾಡಲಾಗಿದ್ದು, ಠಾಣೆಯಲ್ಲಿ ದೂರು ದಾಖಲಾಗಿದೆ.
2013ರಲ್ಲಿ ಸಂಜಯ್ ಕುಮಾರ್ ಈ ಪೇಜ್ ಕ್ರಿಯೇಟ್ ಮಾಡಿದ್ದರು. ಸಂಜಯ್ ದೂರು ನೀಡಿದ್ದು, ಪೊಲೀಸರು ಮೊದಲು ಪೇಜ್‌ನ್ನು ರಿಪೋರ್ಟ್ ಮಾಡುವಂತೆ ಹೇಳಿದ್ದಾರೆ. ಕನಿಷ್ಠ 30 ಮಂದಿ ಪೇಜ್ ರಿಪೋರ್ಟ್ ಮಾಡಿದರೆ ಫೇಸ್‌ಬುಕ್ ಈ ಪೇಜ್‌ನ್ನು ತಾನಾಗಿಯೇ ಡಿಲೀಟ್ ಮಾಡುತ್ತದೆ. ಈವರೆಗೂ ಅಷ್ಟು ಮಂದಿ ಇದನ್ನು ಫೇಕ್ ಎಂದು ರಿಪೋರ್ಟ್ ಮಾಡದ ಕಾರಣ ಪೇಜ್ ಹಾಗೇ ಉಳಿದಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!