ಮುನಿಸು ಮರೆತು 20 ವರ್ಷಗಳ ಬಳಿಕ ಒಂದಾದ ಮಲ್ಲಿಕಾ ಶೆರಾವತ್, ಇಮ್ರಾನ್​ ಹಷ್ಮಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

2004ರ ‘ಮರ್ಡರ್​’ ಸಿನಿಮಾ (Murder Movie) ದಲ್ಲಿ ತೆರೆ ಮೇಲೆ ರಂಜಿಸಿದ ಜೋಡಿ ಇಮ್ರಾನ್​ ಹಷ್ಮಿ ಮತ್ತು ಮಲ್ಲಿಕಾ ಶೆರಾವತ್​ (Mallika Sherawat) ಮುನಿಸು ಮರೆತು 20 ವರ್ಷಗಳ ನಂತರ ಜೊತೆಯಾಗಿ ಕಾಣಿಸಿಕೊಂಡಿದ್ದಾರೆ.

ಪರಸ್ಪರ ತಬ್ಬಿಕೊಂಡು ಉಭಯ ಕುಶಲೋಪರಿ ವಿಚಾರಿಸಿದ್ದಾರೆ. ಈ ಸಂದರ್ಭದ ವಿಡಿಯೋ ವೈರಲ್​ ಆಗಿದೆ.

ಮುಂಬೈನಲ್ಲಿ ಗುರುವಾರ (ಏಪ್ರಿಲ್​ 11) ನಿರ್ಮಾಪಕ ಆನಂದ್​ ಪಂಡಿತ್​ ಅವರ ಮಗಳ ಆರತಕ್ಷತೆ ಕಾರ್ಯಕ್ರಮ ನಡೆದಿದೆ. ಅದರಲ್ಲಿ ಅನೇಕ ಸೆಲೆಬ್ರಿಟಿಗಳು ಭಾಗಿ ಆಗಿದ್ದಾರೆ. ಈ ಸಮಾರಂಭಕ್ಕೆ ಬಂದಿದ್ದಾಗ ಮಲ್ಲಿಕಾ ಶೆರಾವತ್​ ಮತ್ತು ಇಮ್ರಾನ್​ ಹಷ್ಮಿ ಅವರು ಭೇಟಿ ಆಗಿದ್ದಾರೆ. ಇಬ್ಬರೂ ಜೊತೆಯಾಗಿ ಕ್ಯಾಮೆರಾಗೆ ಪೋಸ್ ನೀಡಿದ್ದಾರೆ. ಆ ಮೂಲಕ ತಮ್ಮ ನಡುವೆ ಇದ್ದ 20 ವರ್ಷಗಳ ಮುನಿಸಿಗೆಗೆ ಪೂರ್ಣವಿರಾಮ ಹಾಕಿದ್ದಾರೆ.

20 ವರ್ಷಗಳ ಹಿಂದೆ ಸಿನಿಮಾವೊಂದರ ವಿಚಾರವಾಗಿ ಮನಸ್ತಾಪವಾಗಿತ್ತು. ಹಾಗಾಗಿ ಮಾತು ಬಿಟ್ಟಿದ್ದರು. ಈಗ ಸಮಯ ಬದಲಾಗಿದೆ. ಇಬ್ಬರ ನಡುವೆ ಅದೇನೇ ಆಗಿರಲಿ ಎಲ್ಲಾ ಮರೆತು ಖುಷಿಯಾಗಿರೋದನ್ನ ನೋಡಿ ಭೇಷ್ ಅಭಿಮಾನಿಗಳು ಎಂದಿದ್ದಾರೆ. ಮತ್ತೆ ಇಬ್ಬರ ಕಾಂಬಿನೇಷನ್‌ ಸಿನಿಮಾ ಬರಲಿ ಎಂದು ಆಶಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!