ಅಪೌಷ್ಠಿಕತೆ ನಿವಾರಣೆಗೆ ಸರ್ಕಾರದಿಂದ ಅಗತ್ಯ ಕ್ರಮ: ಸಚಿವ ಆನಂದ್ ಸಿಂಗ್

ಹೊಸ ದಿಗಂತ ವರದಿ, ವಿಜಯನಗರ:

ಕಲ್ಯಾಣ ಕರ್ನಾಟಕ ಭಾಗದ ನಾನಾ ಕಡೆ ಮಕ್ಕಳಲ್ಲಿ ಅಪೌಷ್ಟಿಕತೆ ಸಮಸ್ಯೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಸರ್ಕಾರ ಅಗತ್ಯ ಕ್ರಮ ಕೈಗೊಂಡಿದೆ, ಪಾಲಕರಲ್ಲಿ ಆತಂಕ ಬೇಡ, ಆದರೇ, ಮಕ್ಕಳ ಬಗ್ಗೆ ಜಾಗೃತಿ, ಕಾಳಜಿ ಇರಲಿ ಎಂದು ಪರಿಸರ, ಜೀವಿಶಾಸ್ತ್ರ, ಪ್ರವಾಸೋದ್ಯಮ ಹಾಗು ಜಿಲ್ಲಾ ಉಸ್ತುವಾರಿ ಸಚಿವ ಆನಂದ್ ಸಿಂಗ್ ಅವರು‌ ಹೇಳಿದರು.

ನಗರದ ರೋಟರಿ‌ ಕ್ಲಬ್ ಸಭಾಂಗಣದಲ್ಲಿ ಶ್ರೀ ರಾಮಕೃಷ್ಣ ಸೇವಾಶ್ರಮ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಅಪೌಷ್ಟಿಕತೆಯಿಂದ ಕೂಡಿದ ಮಕ್ಕಳ ಸಂರಕ್ಷಣೆಗಾಗಿ ಪುಷ್ಠಿ ಯೋಜನೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಂಗಳವಾರ ‌ಮಾತನಾಡಿದರು.

ಕಲ್ಯಾಣ ಕರ್ನಾಟಕ ಭಾಗದ ನಾನಾ ಜಿಲ್ಲೆಗಳಲ್ಲಿ ಮಕ್ಕಳಲ್ಲಿ ಅಪೌಷ್ಟಿಕತೆ ಸಮಸ್ಯೆ ಕಂಡು ಬಂದ ಹಿನ್ನಲೆಯಲ್ಲಿ ಎಲ್ಲ ಮಕ್ಕಳನ್ನು‌ ಗುರುತಿಸಿ ಪೌಷ್ಠಿಕ ಆಹಾರ‌ ನೀಡುವುದರ ಜೊತೆಗೆ ಪ್ರತಿ ಹಂತದಲ್ಲೂ ‌ಮಕ್ಕಳ ಯೋಗಕ್ಷೇಮ ವಿಚಾರಿಸಲಾಗುತ್ತಿದೆ. ಆಹಾರದಲ್ಲಿ ಹೆಚ್ಚು ತರಕಾರಿ ಬಳಕೆ ಮಾಡಿದರೇ ಆರೋಗ್ಯ ಸದೃಢವಾಗಿರಲಿದೆ. ಹಸಿ ಸೊಪ್ಪನ್ನು ಆಹಾರದಲ್ಲಿ ಬಳಸುವ ಪದ್ದತಿ ಮುಂದುವರೆಸಬೇಕು ಎಂದರು.

ಕಲ್ಯಾಣ ಕರ್ನಾಟಕ ಭಾಗದ ನಾನಾ ಕಡೆ ಮಕ್ಕಳಲ್ಲಿ ಅಪೌಷ್ಟಿಕತೆ ‌ಕಂಡು ಬಂದ ಹಿನ್ನೆಲೆಯಲ್ಲಿ, ಇದರ ಜೊತೆಗೆ ಮಹಾ ಹೆಮ್ಮಾರಿ ಕೊರೋನಾ ಮೂರನೇ ಸಂಭಾವ್ಯ ಅಲೆಯಿಂದ ಮಕ್ಕಳು ತೊಂದರೆಗೆ ಒಳಗಾಗಬಾರದು ಎಂದು ತುಮಕೂರಿನ ಪಾವಗಡದ ರಾಮಕೃಷ್ಣ ಆಶ್ರಮ ಹಾಗೂ ಬೆಂಗಳೂರಿನ ಇನ್ಫೋಸಿಸ್ ಲಿಮಿಟೆಡ್ ಹಾಗೂ ಮೆ.ಎಡ್ವರ್ಸ್ ಸಿಸ್ಟಮ್ಸ್ ಲಿಮಿಟೆಡ್ ನವರ ಸಹಕಾರದಲ್ಲಿ ಮಕ್ಕಳಿಗೆ ಪೌಷ್ಠಿಕ ಮಿಶ್ರಣದ ಜಾಡಿಗಳನ್ನು ವಿತರಿಸಲಾಗುತ್ತಿದೆ. ಇದರಿಂದ ಮಕ್ಕಳಿಗೆ ನಾನಾ ರೀತಿಯ ಅನುಕೂಲವಾಗಲಿದೆ ಎಂದರು‌. ರಾಮಕೃಷ್ಣ ಆಶ್ರಮದ ಜಪಾನಂದ್ ಸ್ವಾಮೀಜಿ ಅವರು‌ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ನಾನಾ ಖಾಯಿಲೆಗಳು ಹುಟ್ಟಿಕೊಳ್ಳುತ್ತಿದ್ದು, ಪಾಲಕರು ಮಕ್ಜಳ ಬಗ್ಗೆ ಹೆಚ್ಚು ನಿಗಾ ವಹಿಸಬೇಕು, ಯಾವುದೇ ಮಕ್ಕಳು ಅಪೌಷ್ಠಿಕತೆಯಿಂದ ಬಳಲಬಾರದು ಎಂದು ರಾಮಕೃಷ್ಣ ಸೇವಾಶ್ರಮದಿಂದ ನಾನಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಕಲ್ಯಾಣ ಕರ್ನಾಟಕ ಭಾಗದ ಕೆಲ ಕಡೆಗಳಲ್ಲಿ, ಅದರಲ್ಲೂ ಗ್ರಾಮೀಣ ಭಾಗದಲ್ಲಿ ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿರುವ ಬಗ್ಗೆ ವರದಿಯಾಗಿದೆ, ಈ ಹಿನ್ನೆಲೆಯಲ್ಲಿ ನಾನಾ ಸಂಘ ಸಂಸ್ಥೆಯ ಸಹಯೋಗದೊಂದಿಗೆ ಸೇವಾಶ್ರಮದಡಿ ಮಾದರಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ ಎಂದರು. ಹೊಸಪೇಟೆ ‌ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಶೋಕ್‌ ಜೀರೆ ಅವರು ಮಾತನಾಡಿದರು. ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷೆ ಅಶ್ಚಿನಿ ಕೋತಂಬರಿ, ಅಧಿಕಾರಿಗಳಾದ ಆರ್. ‌ನಾಗರಾಜ್, ಡಾ.ಮುನಿ ವಾಸುದೇವ್ ರೆಡ್ಡಿ, ಸಮಾಜ ಸೇವಕ ದೊಡ್ಡಮನಿ ಪಾಂಡುರಂಗ ಶೆಟ್ಟಿ, ರೋಟರಿ ಕ್ಲಬ್ ಕಾರ್ಯದರ್ಶಿ ದೀಪಕ್ ಕುಮಾರ್ ಸೇರಿದಂತೆ ಇತರರು ಉಪಸ್ಥಿತರಿದ್ದರು. ಕೋವಿಡ್-19 ಹಿನ್ನೆಲೆಯಲ್ಲಿ ಸಭೆಯಲ್ಲಿ ಎಲ್ಲ ನಿಯಮಗಳನ್ನು ಪಾಲಿಸುವ ಮೂಲಕ ಅಧಿಕಾರಿಗಳು ಗಮನಸೆಳೆದರು. ಸಭೆಯಲ್ಲಿ ಭಾಗವಹಿಸಿದ ಪ್ರತಿಯೊಬ್ಬರಿಗೂ ಮಾಸ್ಕ್, ಸ್ಯಾನಿಟೈಜರ್ ಹಾಗೂ ಸಾಮಾಜಿಕ ಅಂತರ ಪಾಲನೆ ಮಾಡುತ್ತಿರುವುದು ಕಂಡು ಬಂತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!