ಭೋರ್ಗರೆವ ಕಡಲ ನಡುವೆ ಮಲ್ಪೆ ಬೀಚ್ ಉತ್ಸವ ಸಂಭ್ರಮ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭೋರ್ಗರೆವ ಕಡಲಿನ ನಡುವೆ ಇಳಿ ಸಂಜೆಯಲ್ಲಿ ಸೂರ್ಯನು ತನ್ನ ಬೆಳಕನ್ನು ಮಾರೆ ಮಾಚಿ, ಚಂದ್ರ ನಿಧಾನವಾಗಿ ಮೇಲೆಳುವ ಹೊತ್ತಿಗೆ ಉಡುಪಿ ಜಿಲ್ಲೆಯ ಮಲ್ಪೆ ಕಡಲ ಕಿನಾರೆಯಲ್ಲಿ ಸಂಭ್ರಮದ ಬೀಚ್ ಉತ್ಸವಕ್ಕೆ ಸಾವಿರಾರು ಕಣ್ಣುಗಳು ಸಾಕ್ಷಿಯಾದವು.

ಆರ್ಟಿಸ್ಟ್ ಫೋರಂ ಮತ್ತು ನಿರ್ಮಿತಿ ಕೇಂದ್ರದ ಸಹಭಾಗಿತ್ವದಲ್ಲಿ ೧೫ ಜನ ಕಲಾವಿದರ ತಂಡ ಮಲ್ಪೆ ಕಡಲ ಕಿನಾರೆಯಲ್ಲಿ ಉಡುಪಿಯ ಸಾಂಸ್ಕೃತಿಕ ಸೊಬಗು, ಕಲೆ, ಸಂಸ್ಕೃತಿ, ಆರಾಧನೆ, ಪ್ರವಾಸಿ ತಾಣಗಳ ಕುರಿತು ವಿವಿಧ ಪ್ರಕಾರಗಳಲ್ಲಿ ಚಿತ್ರಿಸಲಾಗಿದೆ. ಇಲ್ಲಿ ಚಿತ್ರಿಸಿ ಪ್ರದರ್ಶಿಸಲ್ಪಟ್ಟ ಚಿತ್ರಗಳನ್ನು ಪ್ರಾಯೋಜಕರಿಗೆ ಉಡುಗೊರೆಯಾಗಿ ನೀಡಲಾಗುತ್ತದೆ. ಪ್ರವಾಸಿಗರಿಗೆ ಉಡುಪಿಯ ಪ್ರವಾಸಿ ತಾಣಗಳ ಬಗ್ಗೆ ಕಿರು ಪರಿಚಯವು ದೊರಕುತ್ತದೆ.

ಮೀನು ಖಾದ್ಯಕ್ಕೆ ಮನಸೋತ ಪ್ರವಾಸಿಗರು
ಬೃಹತ್ ವೇದಿಕೆಯನ್ನು ನಿರ್ಮಿಸಿ ಬಿಸಿ ಬಿಸಿ ತಾಜಾ ಆಹಾರವನ್ನು ತಯಾರಿಸಿ ನೀಡಲಾಗುತ್ತಿತ್ತು. ಅಂಜಲ್, ಬಂಗುಡೆ, ಕಾನೆ ಮೀನಿನ ಮಸಾಲಾ ಫ್ರೈ, ರವಾ ಫ್ರೈ ಯನ್ನು ಮಾಡಿ ನಿಗದಿತ ಮೊತ್ತಕ್ಕೆ ಮಾರಾಟ ಮಾಡಲಾಗುತ್ತಿತ್ತು. ಪ್ರವಾಸಿಗರು ಉಡುಪಿಯ ಮೀನಿನ ಖಾದ್ಯವನ್ನು ಬಾಯಿ ಚಪ್ಪರಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!