ಮಲ್ಪೆ, ಗಂಗೊಳ್ಳಿ, ಬೈಂದೂರಿನಲ್ಲಿ ಪಿಎಫ್ಐ ಮುಖಂಡರ ಮನೆಗೆ ಪೊಲೀಸರ ದಿಢೀರ್ ದಾಳಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಮಂಗಳವಾರ ಮುಂಜಾನೆ 3 ಗಂಟೆಯ ವೇಳೆಗೆ ಜಿಲ್ಲಾ ಪೋಲಿಸರು ಜಿಲ್ಲೆಯ ಮಲ್ಪೆ, ಗಂಗೊಳ್ಳಿ, ಬೈಂದೂರಿನಲ್ಲಿ ಪಿ.ಎಫ್.ಐ ಮುಖಂಡರ ಮನೆಗೆ ದಾಳಿ ನಡೆಸಿ ಮೂವರನ್ನು ವಶಕ್ಕೆ ಪಡೆದಿದ್ದಾರೆ.

ಮಲ್ಪೆ ಸಮೀಪದ ಇಲ್ಯಾಸ್ ಹೂಡೆ, ಕುಂದಾಪುರದ ಆಶಿಕ್ ಕೋಟೆಶ್ವರ, ಗಂಗೊಳ್ಳಿಯ ರಜಾಬ್, ಬೈಂದೂರಿನಲ್ಲಿ ಕಲಿಲ್ ಸೈಯದ್‌ ಹಾಗು ಆದಿ ಉಡುಪಿಯ ಅಶ್ರಫ್ ನನ್ನು ವಶಕ್ಕೆ ಪಡೆದಿದ್ದಾರೆ

ಮುಂಜಾಗ್ರತಾ ಕ್ರಮವಾಗಿ ಉಡುಪಿಯಲ್ಲಿ ನಾಲ್ವರ ಬಂಧಿಸಲಾಗಿದ್ದು, ಕಳೆದ ಐದಾರು ತಿಂಗಳ ಚಟುವಟಿಕೆಗಳನ್ನು ಗಮನಿಸಿದ್ದೇವೆ. ಮುಂದಾಗಬಹುದಾದ ಅಹಿತಕರ ಘಟನೆಗಳನ್ನು ತಪ್ಪಿಸಬೇಕಾಗಿದೆ. ಎನ್ಐಎ ದಾಳಿ ನಂತರ ಹೆಚ್ಚು ನಿಗಾ ವಹಿಸಿದ್ದೆವು, ಬಂಧಿತರ ಹಲವಾರು ಚಟುವಟಿಕೆಗಳ ಬಗ್ಗೆ ವಿಚಾರಣೆ ನಡೆಯಲಿದೆ. ಹಿಂದಿನ ಕ್ರಿಮಿನಲ್ ಚಟುವಟಿಕೆಗಳನ್ನು ಗಣನೆಗೆ ತೆಗೆದುಕೊಂಡಿದ್ದೇವೆ ಎಂದು ಉಡುಪಿ ಪೊಲೀಸ್ ಮೂಲಗಳ ಮಾಹಿತಿ ನೀಡಿವೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!