October 23, 2026
Friday, October 23, 2026
spot_img

KSOU ಪರೀಕ್ಷೆಯಲ್ಲಿ ಅಕ್ರಮ : ಹಣ ಕೊಟ್ಟರೆ ಮೊಬೈಲ್, ಪುಸ್ತಕ ನೋಡಿ ಪರೀಕ್ಷೆ ಬರೆಯಲು ಅವಕಾಶ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ರಾಜ್ಯದಲ್ಲಿ ಕೆಪಿಎಸ್‌ಸಿ ವಿವಾದ ಬಳಿಕ ಇದೀಗ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಶಿವಮೊಗ್ಗ ಪ್ರಾದೇಶಿಕ ಕಚೇರಿಯಲ್ಲಿ ಅಕ್ರಮವೊಂದು ಕಾಣಿಸಿದೆ. ಪರೀಕ್ಷಾರ್ಥಿಗಳು ಹಣ ನೀಡಿದರೆ ಅವರಿಗೆ ಪುಸ್ತಕ, ಫೋನ್‌ ನೋಡಿ ಪರೀಕ್ಷೆ ಬರೆಯಲು ಅವಕಾಶ ನೀಡಲಾಗುತ್ತಿದೆ ಎನ್ನುವ ಆರೋಪ ಕೇಳಿಬಂದಿದೆ.

ಶಿವಮೊಗ್ಗದ ಆಲ್ಕೊಳ ಸರ್ಕಲ್‌ ಬಳಿ ಇರುವ ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದ ಕಚೇರಿಯಲ್ಲಿ ಮಾಸ್‌ ಕಾಪಿ ನಡೆದಿದೆ ಎಂದು ಆರೋಪಿಸಲಾಗಿದೆ. ಕೆಎಸ್‌ಓಯು ಶಿವಮೊಗ್ಗ ಪ್ರಾದೇಶಿಕ ಕಚೇರಿಯ ಪ್ರಾದೇಶಿಕ ನಿರ್ದೇಶಕ ಬಿ.ಎಂ. ಸ್ವಾಮಿ ನೇತೃತ್ವದಲ್ಲಿ ಹಣ ಪಡೆದು ಡಿಗ್ರೀ ಹಾಗೂ ಮಾಸ್ಟರ್‌ ಡಿಗ್ರೀ ಪರೀಕ್ಷೆಗಳಲ್ಲಿ ಸಾಮೂಹಿಕ ನಕಲು ದಂಧೆ ನಡೆಯುತ್ತಿದೆ ಎನ್ನಲಾಗಿದೆ.

ಕೇಳಿದಷ್ಟು ಹಣ ನೀಡಿದರೆ ಪುಸ್ತಕವೆಂದರೆ ಪುಸ್ತಕ, ಫೋನ್‌ ಬೇಕೆಂದರೆ ಫೋನ್‌ನ್ನು ನೀಡಲಾಗುತ್ತದೆ. ಎಲ್ಲರೂ ತಮಗೆ ಬೇಕಾದ್ದನ್ನು ಪಡೆದು ಪರೀಕ್ಷೆ ಬರೆಯುತ್ತಿದ್ದಾರೆ. ಹಣ ನೀಡಿದವರಿಗೆ ಎರಡನೇ ಫ್ಲೋರ್‌ನಲ್ಲಿ ಪರೀಕ್ಷೆ ಹಾಗೂ ಹಣ ನೀಡದವರಿಗೆ ಮೊದಲ ಫ್ಲೋರ್‌ನಲ್ಲಿ ಪರೀಕ್ಷೆಗೆ ಅವಕಾಶ ನೀಡಲಾಗಿದೆ.

Must Read