ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟ ಮಮ್ಮುಟ್ಟಿ – ಜ್ಯೋತಿಕಾ ಅಭಿನಯದ ʼಕಾತಲ್-ದಿ ಕೋರ್ʼ ಸಿನಿಮಾ ನ.23ರಂದು ತೆರೆ ಕಾಣಲು ಸಜ್ಜಾಗಿದೆ. ಇದಕ್ಕೂ ಮುನ್ನವೇ ಸಿನಿಮಾಗೆ ಬ್ಯಾನ್ ಬಿಸಿ ತಟ್ಟಿದೆ.
ಕತಾರ್ ಮತ್ತು ಕುವೈತ್ ದೇಶಗಳಲ್ಲಿ ಈ ಸಿನಿಮಾ ಬಿಡುಗಡೆಗೆ ನಿಷೇಧ ಹೇರಲಾಗಿದೆ.
ಜಿಯೋ ಬೇಬಿ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಚಿತ್ರವು, ಕಥಾವಸ್ತುವಿನಿಂದ ಗಮನ ಸೆಳೆದಿದೆ.
ಚಿತ್ರದಲ್ಲಿ ಮಮ್ಮುಟ್ಟಿ ಸಲಿಂಗಕಾಮಿಯಾಗಿ ಕಾಣಿಸಿಕೊಳ್ಳಲಿದ್ದಾರೆ.
ಸಲಿಂಗಕಾಮಿಯ ಕಥೆಯನ್ನೊಳಗೊಂಡ ಕಾರಣ ಕತಾರ್ ಹಾಗೂ ಕುವೈತ್ ನಲ್ಲಿ ಸಿನಿಮಾವನ್ನು ಬ್ಯಾನ್ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.