ಹೊಸದಿಗಂತ ಡಿಜಿಟಲ್ ಡೆಸ್ಕ್:
2023ರ ಏಕದಿನ ವಿಶ್ವಕಪ್‌ನಲ್ಲಿ ಸತತ ಗೆಲುವಿನೊಂದಿಗೆ ಫೈನಲ್ ತಲುಪಿದ್ದ ಟೀಂ ಇಂಡಿಯಾ ಕಪ್ ಗೆಲ್ಲುವಲ್ಲಿ ಸೋಲು ಕಂಡಿತ್ತು. 12 ವರ್ಷಗಳ ಬಳಿಕ ವಿಶ್ವಕಪ್‌ಗೆ ಮುತ್ತಿಕ್ಕುವ ಸುವರ್ಣಾವಕಾಶ ಸ್ವಲ್ಪದರಲ್ಲೇ ಕೈ ತಪ್ಪಿತು. ಇದರಿಂದಾಗಿ ಕೋಟ್ಯಂತರ ಭಾರತೀಯರು ಕನಸು ಕನಸಾಗಿಯೇ ಉಳಿಯಿತು.
ವಿಶಿಷ್ಟ ಪ್ರದರ್ಶನ ತೋರಿದ ರೋಹಿತ್ ಸೇನೆಗೆ ಸಾಮಾಜಿಕ ಜಾಲತಾಣದಲ್ಲಿ ಬೆಂಬಲ ವ್ಯಕ್ತವಾಗಿದೆ ಪೋಸ್ಟ್‌ಗಳನ್ನು ಪೋಸ್ಟ್ ಮಾಡಲಾಗುತ್ತಿದೆ. ಈ ವೇಳೆ ಕೆಲವರು ಟೀಂ ಇಂಡಿಯಾ ಸೋಲಿನ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಟೀಕೆ ಮಾಡುತ್ತಿದ್ದಾರೆ. ಇಂತಹವರ ವಿರುದ್ಧ ಕಾಂಗ್ರೆಸ್ ನಾಯಕಿ ವಿಜಯಶಾಂತಿ ಟ್ವೀಟ್ ಮಾಡಿ ಹರಿಹಾಯ್ದಿದ್ದಾರೆ.
ಟ್ವೀಟ್‌ನಲ್ಲಿ,ʻಭಾರತ ಹಲವು ಲೀಗ್ ಪಂದ್ಯಗಳು ಮತ್ತು ಸೆಮಿಸ್‌ಗಳನ್ನು ಗೆದ್ದಿದೆ. ವಿಶ್ವಕಪ್ 2023 ಪಂದ್ಯಾವಳಿಯಲ್ಲಿ, ಸತತವಾಗಿ 10 ಪಂದ್ಯಗಳನ್ನು ಗೆದ್ದರು. ಹಲವು ಯಶಸ್ಸುಗಳ ನಂತರವೂ ಎಲ್ಲೋ ಒಂದು ಸೋಲು ಯಾರಿಗಾದರೂ ನೋವುಂಟು ಮಾಡುತ್ತದೆ. ಎಲ್ಲಾ ಪಂದ್ಯಗಳನ್ನು ಗೆದ್ದು, ಕಳೆದ ಪಂದ್ಯದಲ್ಲಿ ಸೋತ ಭಾರತ ಕ್ರಿಕೆಟ್ ತಂಡದ ಆಟಗಾರರನ್ನು ಟ್ರೋಲ್ ಮಾಡುವುದು ಸರಿಯಲ್ಲ. ವಾಸ್ತವವಾಗಿ, ಭಾರತ 10 ಪಂದ್ಯಗಳನ್ನು ಗೆದ್ದ ನಂತರ ಫೈನಲ್‌ಗೆ ತಲುಪಿತು ಆದರೆ, ಆಸ್ಟ್ರೇಲಿಯಾ ಎಷ್ಟು ಪಂದ್ಯಗಳನ್ನು ಗೆದ್ದಿದೆ? ಎಂದು ಪ್ರಶ್ನೆ ಮಾಡಿದ್ದಾರೆ.
ಇತರ ಕೆಲವು ಸ್ಪರ್ಧೆಗಳಂತೆ ವಿಶ್ವಕಪ್ ಕ್ರಿಕೆಟ್ ಫೈನಲ್‌ಗಳನ್ನು ಅತ್ಯುತ್ತಮ-3 ಆಧಾರದ ಮೇಲೆ ನಡೆಸಿದರೆ, ಸಾರ್ವಜನಿಕರು ನಿಜವಾದ ಪ್ರತಿಭೆಗಳ ಬಗ್ಗೆ ಹೆಚ್ಚು ತಿಳಿದುಕೊಳ್ಳುತ್ತಾರೆ ಎಂದು ವಿಜಯಶಾಂತಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.