ಮೈಸೂರಿನಲ್ಲಿ ಸಿಐಡಿ ಅಧಿಕಾರಿಗಳ ದಾಳಿ: ಬೆಕ್ಕು, ಹಾವುಗಳನ್ನು ಸಂಗ್ರಹಿಸಿದ್ದ ಆರೋಪಿ ಅರೆಸ್ಟ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಮೈಸೂರು ನಗರದಲ್ಲಿ ವ್ಯಕ್ತಿಯೊಬ್ಬರ ಮನೆಯಲ್ಲಿ ಸಂಗ್ರಹಿಸಿದ್ದ ವಿವಿಧ ಬಗೆಯ ಅಪರೂಪದ ಹಾವು, 4 ಬೆಕ್ಕುಗಳನ್ನು ಸಿಐಡಿ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಖಚಿತ ಮಾಹಿತಿ ಮೇರೆಗೆ ಅಪರಾಧ ತನಿಖಾ ಇಲಾಖೆಯ ಅರಣ್ಯ ವಿಭಾಗದ ಅಧಿಕಾರಿಗಳು ಮೈಸೂರಿನ ರಾಜೀವ್‌ನಗರದ ಸಂದೀಪ್ ಅಲಿಯಾಸ್ ದೀಪು ಎಂಬುವವರ ಮನೆ ಮೇಲೆ ದಾಳಿ ನಡೆಸಿ ಹಾವು, ಬೆಕ್ಕುಗಳನ್ನು ವಶಪಡಿಸಿಕೊಂಡು, ಆರೋಪಿಯನ್ನು ಬಂಧಿಸಿದ್ದಾರೆ.

ಮನೆಯಲ್ಲಿದ್ದ 4-ನಾಗರಹಾವು, ಮಣ್ಣುಮುಕ್ಕ ಹಾವು, 2-ಆಭರಣದ ಹಾವು, ಕಟ್ಟಾವು, ಗರಗಸ ಮಂಡಲ ಹಾವು, ಕೆರೆ ಹಾವು 1- ತೋಳದ ಹಾವು, 1-ಪಚ್ಚೆ ಹಾವು, 1-ನೀರು ಹಾವು, 4-ಪುನುಗು ಬೆಕ್ಕುಗಳನ್ನು ವಶಪಡಿಸಿಕೊಂಡರು. ಹಾವುಗಳ ಜೊತೆಗೆ ಸಂದೀಪ್‌ ಬಳಿಯಿದ್ದ ವಿಷ ತೆಗೆಯುವ ಮಿಷನ್‌ ಅನ್ನು ಕೂಡ ವಶಕ್ಕೆ ಪಡೆದಿದ್ದಾರೆ.

ಸಂದೀಪ್ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆ, 1972ರ ವಿವಿಧ ನಿಬಂಧನೆಗಳ ಅಡಿಯಲ್ಲಿ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಯಿತು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!