ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಯೋಧ್ಯೆಯ ಸರೈಉ ನದಿಯಲ್ಲಿ ಸ್ನಾನ ಮಾಡುವಾಗಿ ತನ್ನ ಪತ್ನಿಯನ್ನು ಚುಂಬಿಸಿದ ಪತಿಗೆ ಜನ ಧರ್ಮದೇಟು ನೀಡಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಪರ\ವಿರೋಧ ಚರ್ಚೆಯಾಗುತ್ತಿದೆ.
ಪವಿತ್ರ ಜಾಗದಲ್ಲಿ ದಂಪತಿಯ ಅಸಭ್ಯ ನಡೆಗೆ ನದಿಯಲ್ಲಿದ್ದ ಕೆಲವರು ಆಕ್ರೋಶಗೊಂಡಿದ್ದು, ವ್ಯಕ್ತಿಯನ್ನು ಪತ್ನಿ ಮುಂದೆಯೇ ಥಳಿಸಿದ್ದಾರೆ. ಅಯೋಧ್ಯೆಯಲ್ಲಿ ಅಶ್ಲೀಲತೆಯನ್ನು ನಾವು ಸಹಿಸುವುದಿಲ್ಲ ಎಂದು ಧರ್ಮದೇಟು ನೀಡಿದ್ದಾರೆ. ತನ್ನ ಗಂಡನನ್ನು ಕಾಪಾಡಿಕೊಳ್ಳುವ ಹೆಂಡತಿಯ ಪ್ರಯತ್ನ ಕೂಡ ವಿಫವಾಗಿದೆ. ಕೂಡಲೇ ನದಿಯಿಂದ ದಂಪತಿಯನ್ನು ಹೊರಹಾಕಿದ ಗುಂಪು ಇಬ್ಬರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಈ ಸಂಬಂಧ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಪೊಲೀಸರು ಸ್ಪಷ್ಟಪಡಿಸಿದ್ದಾರೆ.