ಲಂಡನ್‌ ಬೀದಿಯಲ್ಲಿ ವ್ಯಕ್ತಿಯಿಂದ ಹುಚ್ಚಾಟ: ಸಿಕ್ಕಸಿಕ್ಕವರ ಮೇಲೆ ತಲ್ವಾರ್‌ನಿಂದ ದಾಳಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:  

ಬ್ರಿಟನ್ ರಾಜಧಾನಿ ಲಂಡನ್‌ನ ಹೈನಾಲ್ಟ್ ಪ್ರದೇಶದ ಬಳಿ ವ್ಯಕ್ತಿ ಓರ್ವ ಸಾಮಾನ್ಯ ಜನರ ಮೇಲೆ ತಲ್ವಾರ್‌ನಿಂದ ಹಲ್ಲೆ ನಡೆಸಿ ಹುಚ್ಚಾಟ ಮೆರೆದಿದ್ದಾರೆ.

ಘಟನೆಯಲ್ಲಿ ಹಲವಾರು ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ
ಇಬ್ಬರು ಪೊಲೀಸರ ಮೇಲೂ ಈತ ಹಲ್ಲೆ ನಡೆಸಿದ್ದು, ಎಲ್ಲರನ್ನೂ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಎಎಫ್‌ಪಿ ವರದಿಯ ಪ್ರಕಾರ, ಹಲವಾರು ಜನರ ಮೇಲೆ ಈ ದಾಳಿ ನಡೆಸಿದ್ದಾನೆ ಎಂದು ಮೆಟ್ರೋಪಾಲಿಟನ್‌ ಪೊಲೀಸರು ತಿಳಿಸಿದ್ದಾರೆ.

ಗ್ರೇಟರ್ ಲಂಡನ್‌ನ 620 ಚದರ ಮೈಲುಗಳನ್ನು (1,605 ಚದರ ಕಿಲೋಮೀಟರ್) ಪೊಲೀಸಿಂಗ್‌ ಮಾಡುವ ದಿ ಮೆಟ್, 36 ವರ್ಷದ ವ್ಯಕ್ತಿಯನ್ನು ಘಟನಾ ಸ್ಥಳದಲ್ಲಿ ಬಂಧಿಸಲಾಗಿದೆ ಎಂದು ಹೇಳಿದೆ.

ಸೋಶಿಯಲ್‌ ಮೀಡಿಯಾದಲ್ಲಿ ವ್ಯಕ್ತಿ ಕತ್ತಿ ಹಿಡಿದು ದಾಳಿ ಮಾಡುತ್ತಿರುವ ವಿಡಿಯೋ ಹಾಗೂ ದೃಶ್ಯಗಳು ವೈರಲ್‌ ಆಗಿದೆ.

ಮೆಟ್ರೋಪಾಲಿಟನ್ ಪೋಲಿಸ್‌ನ ಉಪ ಸಹಾಯಕ ಕಮಿಷನರ್ ಅಡೆ ಅಡೆಲಕನ್ ಮಾತನಾಡಿದ್ದು, ಹಲ್ಲೆಗೆ ಒಳಗಾದ ವ್ಯಕ್ತಿಗಳ ಪಾಲಿಗೆ ಇದು ಭಯಾನಕ ಘಟನೆ. ಬಹಳಷ್ಟು ಜನರು ಆತಂಕಕ್ಕೆ ಒಳಗಾಗಿದ್ದರು. ಆದರೆ, ಇದು ಭಯೋತ್ಪಾದಕ ಘಟನೆಯಲ್ಲ ಎಂದು ನಾವು ಭಾವಿಸುತ್ತೇವೆ’ ಎಂದು ಹೇಳಿದ್ದಾರೆ.

ಬ್ರಿಟನ್‌ನ ಗೃಹ ಕಾರ್ಯದರ್ಶಿ ಜೇಮ್ಸ್ ಕ್ಲೆವರ್ಲಿ ಈ ಕುರಿತಾಗಿ ಪ್ರತಿಕ್ರಿಯೆ ನೀಡಿದ್ದು “ಮಂಗಳವಾರ ಬೆಳಿಗ್ಗೆ ಹೈನಾಲ್ಟ್ ನಿಲ್ದಾಣದಲ್ಲಿ ನಡೆದ ಘಟನೆಯ ಬಗ್ಗೆ ನನಗೆ ನಿಯಮಿತವಾಗಿ ಅಪ್‌ಡೇಟ್ ಮಾಡಲಾಗುತ್ತಿದೆ. ಗಾಯಗೊಂಡವರು ಬೇಗ ಚೇತರಿಸಿಕೊಳ್ಳಲಿ’ ಎಂದು ಟ್ವೀಟ್‌ ಮಾಡಿದ್ದಾರೆ. ಲಂಡನ್ ಆಂಬ್ಯುಲೆನ್ಸ್ ಸೇವೆಯ ಟೀಮ್‌ ಐದು ಜನರಿಗೆ ಚಿಕಿತ್ಸೆ ನೀಡಿದೆ ಎಂದು ಹೇಳಿದೆ. ಅವರನ್ನೆಲ್ಲ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅವರ ಸ್ಥಿತಿಯ ಬಗ್ಗೆ ತಕ್ಷಣ ಏನನ್ನೂ ಹೇಳಲು ಸಾಧ್ಯವಿಲ್ಲ ಎನ್ನಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!