ಹೊಸದಿಗಂತ ವರದಿ, ಅಂಕೋಲಾ:
ಚಲಿಸುತ್ತಿರುವ ರೈಲಿಗೆ ತಲೆಕೊಟ್ಟು ವ್ಯಕ್ತಿಯೋರ್ವ ಆತ್ಮಹತ್ಯೆಗೆ ಶರಣಾದ ಘಟನೆ ಅಂಕೋಲಾ ಜಮಗೋಡ ರೈಲ್ವೆ ನಿಲ್ದಾಣದ ಸಮೀಪ ಸೋಮವಾರ ಬೆಳಗ್ಗೆ ಸಂಭವಿಸಿದೆ.
ಬೋಳೆ ಹೊಸಗದ್ದೆ ನಿವಾಸಿ ವಿಠೋಬಾ ಪಾಲ್ಗುಣ ಗೌಡ (39) ಮೃತ ವ್ಯಕ್ತಿಯಾಗಿದ್ದು ಕೂಲಿ ಕೆಲಸ ಮಾಡಿಕೊಂಡಿದ್ದ ಈತ ಯಾವುದೋ ವಿಷಯದಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಅಂದಾಜಿಸಲಾಗಿದೆ.
ಅಂಕೋಲಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ಧು ರೈಲ್ವೆ ಹಳಿಯಿಂದ ಮೃತ ದೇಹವನ್ನು ತೆರುವುಗೊಳಿಸಲು ಕ್ರಮ ಕೈಗೊಂಡರು.
ಈ ಕುರಿತು ಅಂಕೋಲಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ಪೊಲೀಸರು ತನಿಖೆ ಕೈಗೊಂಡಿದ್ದಾರೆ.