ಹೊಸದಿಗಂತ ವರದಿ ಮಡಿಕೇರಿ:
ಒಂಟಿ ನಳಿಕೆಯ ಬಂದೂಕಿನಿಂದ ಆಕಸ್ಮಿಕವಾಗಿ ಗುಂಡು ಸಿಡಿದು ವ್ಯಕ್ತಿಯೊಬ್ಬರು ಸಾವಿಗೀಡಾಗಿರುವ ಘಟನೆ ಬುಧವಾರ ರಾತ್ರಿ ಮಡಿಕೇರಿ ತಾಲೂಕಿನ ಚೇರಂಬಾಣೆಯಲ್ಲಿ ನಡೆದಿದೆ.
ಚೇರಂಬಾಣೆಯ ಮಿತ್ರ ವೈನ್ಸ್ ಮಾಲಕ, ಪೊನ್ನಚೆಟ್ಟಿರ ಮಿತ್ರ ಚಂಗಪ್ಪ (49) ಎಂಬುವರೇ ಆಕಸ್ಮಿಕವಾಗಿ ಗುಂಡೇಟಿಗೆ ಬಲಿಯಾದವಾರಾಗಿದ್ದಾರೆ.
ಚೇರಂಬಾಣೆ ಪಟ್ಟಣದಲ್ಲಿ ವೈನ್ ಶಾಪ್ ಹೊಂದಿರುವ ಮಿತ್ರ ಅವರು ರಾತ್ರಿ ವೈನ್ ಶಾಪ್ ಮುಚ್ಚಿ ಬಂದೂಕಿನೊಂದಿಗೆ ಹೊರಬಂದಿದ್ದಾರೆ. ಇದೇ ಸಂದರ್ಭ ಹಾಲು ಸರಬರಾಜಿನ ವಾಹನ ಬಂದಿದ್ದು, ಮಿತ್ರ ಚಂಗಪ್ಪ ಅವರು ಹಾಲು ಕೊಂಡುಕೊಳ್ಳಲೆಂದು ಕೈಯಲ್ಲಿದ್ದ ಬಂದೂಕನ್ನು ಸ್ಕೂಟರ್ ಮೇಲಿಟ್ಟಿದ್ದಾರೆ. ಅಲ್ಲಿಂದ ಜಾರಿ ಕೆಳಗೆ ಬಿದ್ದ ಬಂದೂಕಿನಿಂದ ಆಕಸ್ಮಿಕವಾಗಿ ಗುಂಡು ಹಾರಿ ಮಿತ್ರ ಅವರಿಗೆ ತಗುಲಿ ಸಾವನ್ನಪ್ಪಿರುವುದಾಗಿ ಹೇಳಲಾಗಿದೆ.
ಈ ಸಂಬಂಧ ಭಾಗಮಂಡಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.