ಆಸ್ಟ್ರೇಲಿಯಾ ಆಲೌಟ್: ಟೀಮ್ ಇಂಡಿಯಾಗೆ ಗೆಲುವಿನ ಖುಷಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಭಾರತ ವಿರುದ್ಧದ ಸರಣಿಯಲ್ಲಿ2ನೇ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವನ್ನು 217 ರನ್‌ಗೆ ಆಲೌಟ್ ಆಗಿದೆ. ಈ ಮೂಲಕ ಟೀಂ ಇಂಡಿಯಾ 99 ರನ್ ಗೆಲುವು ದಾಖಲಿಸಿದೆ.

ಭರ್ಜರಿ ಗೆಲುವಿನೊಂದಿಗೆ ಟೀಂ ಇಂಡಿಯಾ ಇನ್ನೂ ಒಂದು ಪಂದ್ಯ ಬಾಕಿ ಇರುವಂತೆ ಏಕದಿನ ಸರಣಿ ಗೆದ್ದುಕೊಂಡಿದೆ.
ಭಾರತ 400 ರನ್ ಟಾರ್ಗೆಟ್ ನೀಡಿತ್ತು. ಆದರೆ ಮಳೆಯಿಂದ ಡಿಎಲ್ಎಸ್ ಪ್ರಕಾರ 317 ರನ್ ಟಾರ್ಗೆಟ್ ನೀಡಲಾಗಿತ್ತು. ಈ ಟಾರ್ಗೆಟ್ ಚೇಸಿಂಗ್ ಮಾಡಲು ವಿಫಲವಾದ ಆಸ್ಟ್ರೇಲಿಯಾ ಓವರ್‌ಗೆ 217 ರನ್ ಸಿಡಿಸಿ ಆಲೌಟ್ ಆಯಿತು.

399 ರನ್ ಟಾರ್ಗೆಟ್ ಚೇಸ್ ಮಾಡಲು ಕಣಕ್ಕಿಳಿದ ಆಸ್ಟ್ರೇಲಿಯಾ ಆರಂಭದಲ್ಲೇ 2 ವಿಕೆಟ್ ಕಳೆದುಕೊಂಡು ಆತಂಕ ಎದುರಿಸಿತು. ಮ್ಯಾಥ್ಯೂ ಶಾರ್ಟ್ ಕೇವಲ 9 ರನ್ ಸಿಡಿಸಿ ಔಟಾದರು. ಇತ್ತ ಸ್ಟೀವ್ ಸ್ಮಿತ್ ಡಕೌಟ್ ಆದರು.

ಆಸ್ಟ್ರೇಲಿಯಾ 9 ಓವರ್‌ಗೆ 2 ವಿಕೆಟ್ ಕಳೆದುಕೊಂಡು 52 ರನ್ ಸಿಡಿಸಿದಾಗ ಮಳೆ ವಕ್ಕರಿಸಿತು. ಹೆಚ್ಚು ಹೊತ್ತು ಮಳೆ ಸುರಿದ ಕಾರಣ ಪಂದ್ಯ ವಿಳಂಬಗೊಂಡಿತು. ಹೀಗಾಗಿ ಡಕ್ ವರ್ತ್ ನಿಯಮ ಅನ್ವಯಿಸಲಾಗಿತ್ತು. ಈ ವೇಳೆ ಆಸ್ಟ್ರೇಲಿಯಾಗೆ 33 ಓವರ್‌ನಲ್ಲಿ 317 ರನ್ ಟಾರ್ಗೆಟ್ ನೀಡಲಾಗಿತ್ತು.

ಡೇವಿಡ್ ವಾರ್ನರ್ ಸ್ಪೋಟಕ ಹಾಫ್ ಸೆಂಚುರಿ ಸಿಡಿಸಿದರು. 53 ರನ್ ಸಿಡಿಸಿದ ವಾರ್ನರ್ ಕೂಡ ಅಶ್ವಿನ್ ಸ್ಪಿನ್ ದಾಳಿಗೆ ಔಟಾದರು.
ಜೋಶ್ ಇಂಗ್ಲೀಸ್ ಕೇವಲ 6 ರನ್ ಸಿಡಿಸಿ ನಿರ್ಗಮಿಸಿದರು. ಅಲೆಕ್ಸ್ ಕ್ಯಾರಿ 14 ರನ್ ಸಿಡಿಸಿ ನಿರ್ಗಮಿಸಿದರು. ಇತ್ತ ಕ್ಯಾಮರೂನ್ ಗ್ರೀನ್ 19 ರನ್ ಸಿಡಿಸಿ ಔಟಾದರು. ಆ್ಯಡಮ್ ಜಂಪಾ 5 ರನ್ ಗಳಿಸಿ ಔಟಾದರು. ಆದರೆ ಸೀನ್ ಅಬಾಟ್ ಹಾಗೂ ಜೋಶ್ ಹೇಜಲ್‌ವುಡ್ ಅಂತಿಮ ಹಂತದಲ್ಲಿ ಅಬ್ಬರಿಸಿದರು. ಇತ್ತ ಜೋಶ್ ಹೇಜಲ್‌ವುಡ್ 23 ರನ್ ಸಿಡಿಸಿ ಔಟಾದರು. ಇದರ ಬೆನ್ನಲ್ಲೇ ಸೀನ್ ಅಬಾಟ್ 53 ರನ್ ಸಿಡಿಸಿ ಔಟಾದರು. ಇದರೊಂದಿಗೆ ಆಸ್ಟ್ರೇಲಿಯಾ 28.2 ಓವರ್‌ಗಳಲ್ಲಿ 217ರನ್‌ಗೆ ಆಲೌಟ್ ಆಯಿತು. ಭಾರತ 99 ರನ್ ಗೆಲುವು ದಾಖಲಿಸಿತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!