ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಧ್ಯಪ್ರದೇಶದ ದಿಂಡೋರಿ ಜಿಲ್ಲೆಯಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ರಸಗುಲ್ಲಾ ಎಂದು ಭಾವಿಸಿ ವ್ಯಕ್ತಿಯೊಬ್ಬ ಸ್ಫೋಟಕವನ್ನು ಬಾಯಿಗೆ ಹಾಕಿಕೊಂಡು ಮೃತಪಟ್ಟಿದ್ದಾರೆ.
ನ.10ರ ತಡರಾತ್ರಿ ಪದಾರಿಯಾ ಗ್ರಾಮದ ರಾಜೇಂದ್ರ ಬರೋಟಿಯಾ ಮೃತರು. ರಾಜೇಂದ್ರ ಅವರು ಮನೆಯಲ್ಲಿದ್ದಾಗ ರಾಮ್ ಭಗತ್ ಬರೋಟಿಯಾ ಎನ್ನುವವರು ಬಂದಿದ್ದಾರೆ. ಆತನ ಕೈಯಲ್ಲಿ ಬಿಳಿ ದುಂಡನೆಯ ವಸ್ತುವನ್ನು ರಾಜೇಂದ್ರ ಅವರಿಗೆ ನೀಡಿ, ಅದು ರಸಗುಲ್ಲಾ ಎಂದು ಹೇಳಿದ್ದಾರೆ.
ಸಿಹಿತಿಂಡಿ ಎಂದು ಭಾವಿಸಿ ರಾಜೇಂದ್ರ ಅದನ್ನು ಬಾಯಿಗೆ ಹಾಕಿಕೊಂಡಿದ್ದಾರೆ. ತಕ್ಷಣವೇ ರಾಜೇಂದ್ರ ಅದನ್ನು ಬಾಯಿಗೆ ಹಾಕಿಕೊಂಡಿದ್ದಾರೆ.ಆದರೆ ಅದು ರಸಗುಲ್ಲಾ ಆಗಿರಲಿಲ್ಲ, ದೇಶೀಯವಾಗಿ ತಯಾರಿಸಿದ ಸ್ಫೋಟಕವಾಗಿತ್ತು. ಬಾಯಿಗೆ ಹಾಕಿಕೊಂಡ ಕೆಲವೇ ಕ್ಷಣಗಳಲ್ಲಿ ಅದು ಸ್ಫೋಟಗೊಂಡಿದೆ. ಸ್ಫೋಟದ ತೀವ್ರತೆಗೆ ರಾಜೇಂದ್ರ ಗಂಭೀರವಾಗಿ ಗಾಯಗೊಂಡು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
ಸ್ಫೋಟದ ಶಬ್ದ ಕೇಳಿದ ತಕ್ಷಣ ರಾಜೇಂದ್ರ ಅವರ ಪತ್ನಿ ಸುಶೀಲಾ ಬಾಯಿ ಕೋಣೆಯಿಂದ ಹೊರಗೆ ಬಂದು ನೋಡಿದ್ದಾರೆ. ಪತಿ ಗಾಯಗೊಂಡು ಬಿದ್ದಿರುವುದನ್ನು ಕಂಡು ನೆರೆಹೊರೆಯವರ ಸಹಾಯದಿಂದ ಆಸ್ಪತ್ರೆಗೆ ಕರೆದೊಯ್ಯಲು ಪ್ರಯತ್ನಿಸಿದ್ದಾರೆ. ಘಟನೆಯ ಮಾಹಿತಿ ತಿಳಿದ ಪೊಲೀಸರು ಸ್ಥಳಕ್ಕೆ ಧಾವಿಸಿ ತನಿಖೆ ಆರಂಭಿಸಿದ್ದಾರೆ. ಈ ಸಂಬಂಧ ರಾಮ್ ಭಗತ್ ಬರೋಟಿಯಾ ಸೇರಿದಂತೆ ಇಬ್ಬರನ್ನು ಬಂಧಿಸಲಾಗಿದೆ. ವಿಚಾರಣೆ ವೇಳೆ ರಾಮ್ ಭಗತ್, ತನಗೆ ಒಬ್ಬ ಹುಡುಗ ಬಾಂಬ್ ನೀಡಿದ್ದ ಎಂದು ಹೇಳಿದ್ದಾನೆ. ಆ ಹುಡುಗನನ್ನೂ ಪೊಲೀಸರು ಬಂಧಿಸಿದ್ದಾರೆ.



