ನೀಟ್‌ ಪರೀಕ್ಷೆಯಲ್ಲಿ ಮಗ ಫೇಲ್‌ ಆಗಿ ಆತ್ಮಹತ್ಯೆ: ಮನನೊಂದು ತಂದೆಯೂ ಸಾವಿಗೆ ಶರಣು!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ನೀಟ್ ಪರೀಕ್ಷೆಯಲ್ಲಿ ಅನುತ್ತೀರ್ಣನಾದ ಹಿನ್ನೆಲೆ ವಿದ್ಯಾರ್ಥಿಯೋರ್ವ ಆತ್ಮಹತ್ಯೆಗೆ ಶರಣಾಗಿದ್ದಾನೆ. ಇದರಿಂದ ಮನನೊಂದ ತಂದೆ ಸಾವಿಗೆ ಶರಣಾದ ಘಟನೆ ತಮಿಳುನಾಡಿನಲ್ಲಿ ನಡೆದಿದೆ.

ತಮಿಳುನಾಡಿನ ಚೆನ್ನೈನ ಕ್ರೋಮಾಪೇಟ್ ನಲ್ಲಿ ಈ ದುರಂತ ಸಂಭವಿಸಿದ್ದು, ವಿದ್ಯಾರ್ಥಿ ಜಗದೀಶ್ವರನ್ (19) ಎರಡನೇ ಬಾರಿಯೂ ನೀಟ್ ಪರೀಕ್ಷೆಯಲ್ಲಿ ಫೇಲ್ ಆಗಿರುತ್ತಾನೆ. ಇದರಿಂದಾಗಿ ಮನನೊಂದು ಶನಿವಾರ ಮನೆಯಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಮಗನ ಭವಿಷ್ಯದ ಬಗ್ಗೆ ಕನಸು ಕಂಡಿದ್ದ ತಂದೆ ಸೆಲ್ವಶೇಖರ್‌, ಮಗನ ಸಾವಿನಿಂದ ಕಂಗಾಲಾಗಿದ್ದರು. ಭಾನುವಾರದಂದು ತನ್ನ ಮಗನ ಅಂತ್ಯಸಂಸ್ಕಾರ ನೆರವೇರಿಸಿ ಮನೆಗೆ ಬಂದ ಕೂಡಲೆ ಸೆಲ್ವಶೇಖರ್‌ ನೇಣಿಗೆ ಶರಣಾಗಿದ್ದಾರೆ.

ಮಗನ ಸಾವಿನ ಬೆನ್ನಲ್ಲೇ ತಂದೆಯೂ ಸಾವಿಗೆ ಶರಣಾಗಿದ್ದು, ಕುಟುಂಬ ಆಘಾತಕ್ಕೊಳಗಾಗಿದೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೆತ್ತುಕೊಂಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!