Friday, June 2, 2023

Latest Posts

ಹೆಂಡತಿ ಜೊತೆ ಡ್ಯಾನ್ಸ್ ಮಾಡುತ್ತಿದ್ದ ಸಹೋದರ, ಸಿಟ್ಟಿಗೆದ್ದ ಪತಿ ಹೀಗೆ ಮಾಡಬಾರದಿತ್ತು!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಮದುವೆ ಮನೆ ಎಂದ ಮೇಲೆ ಸಂಭ್ರಮ, ಹಾಡು-ಡ್ಯಾನ್ಸ್ ಎಲ್ಲವೂ ಇದ್ದೇ ಇರುತ್ತದೆ. ಹಾಗೇ ಕುಡುಕರು ಇದ್ದಲ್ಲಿ ಗಲಾಟೆ, ಅಸಭ್ಯ ವರ್ತನೆ, ಕ್ರೈಂಗಳು ನಡೆದೇ ನಡೆಯುತ್ತದೆ. ಈಗ ಛತ್ತೀಸ್​ಗಢ್​​ನ ಕಬೀರ್​ಧಾಮ್​ ಜಿಲ್ಲೆಯಲ್ಲಿ ಕುಡುಕನೊಬ್ಬ ಮದುವೆ ಮನೆಯಲ್ಲೇ ಇಬ್ಬರ ಹತ್ಯೆ ಮಾಡಿದ್ದಾನೆ.

ತನ್ನ ಪತ್ನಿ, ಹಿರಿಯ ಸಹೋದರ ಮತ್ತು ಮೈದುನನ ಮೇಲೆ ಹಲ್ಲೆ ನಡೆಸಿದ್ದಾನೆ. ಇದೀಗ ಆತನ ಪತ್ನಿ ಅಪಾಯದಿಂದ ಪಾರಾಗಿದ್ದು, ಹಿರಿಯ ಸಹೋದರ ಮತ್ತು ಮೈದುನನ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಇಬ್ಬರಿಗೂ ಸಮೀಪದ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.

ಆರೋಪಿಯ ಹೆಸರು ತಿನ್ಹಾ ಬೇಗಾ. ಬಂಗೂರ ಎಂಬ ಗ್ರಾಮದವನು. ಹಳ್ಳಿಯಲ್ಲಿಸಂಬಂಧಿಕರ ಮದುವೆಗೆ ಹಾಜರಾಗಿದ್ದರು. ನೂರಾರು ಜನ ಅತಿಥಿಗಳು ಬಂದಿದ್ದರು. ತಿನ್ಹಾ ಬೇಗಾನ ಪತ್ನಿ ಅಲ್ಲಿ ಡ್ಯಾನ್ಸ್ ಮಾಡುತ್ತಿದ್ದ ಇತರ ಸಂಬಂಧಿಕರು, ಕುಟುಂಬದವರ ಜತೆ ತಾನೂ ಹೆಜ್ಜೆ ಹಾಕಿದಳು. ಅವಳೊಂದಿಗೆ ತಿನ್ಹಾ ಬೇಗಾನ ಇಬ್ಬರು ಕಿರಿಯ ಸಹೋದರರು ಕೂಡ ಡ್ಯಾನ್ಸ್ ಮಾಡುತ್ತಿದ್ದರು. ಇದನ್ನೆಲ್ಲ ನೋಡಿದ ತಿನ್ಹಾ ಕೆಂಡಾಮಂಡಲಗೊಂಡು ಮಾರಕಾಸ್ತ್ರಗಳಿಂದ ಎಲ್ಲರ ಮೇಲೆ ಹಲ್ಲೆ ಮಾಡಿದ್ದಾನೆ. ಪತ್ನಿ ತನ್ನ ಸಹೋದರರ ಜತೆ ನೃತ್ಯ ಮಾಡುತ್ತಿರುವುದನ್ನು ನೋಡಿ ಅರಗಿಸಿಕೊಳ್ಳಲು ಸಾಧ್ಯವಾಗದೆ ಅವನು ಈ ಕೃತ್ಯ ಎಸಗಿದ್ದಾನೆ.

ಘಟನೆ ಬಗ್ಗೆ ಮಾಹಿತಿ ನೀಡಿದ ಎಸ್​ಪಿ ಡಾ. ಲಾಲುಮಂಡ್ ಸಿಂಗ್, ‘ಮೃತರ ಶವಗಳನ್ನು ಪೋಸ್ಟ್ ಮಾರ್ಟಮ್​​ಗೆ ಕಳಿಸಲಾಗಿದೆ. ಇನ್ನಿಬ್ಬರ ಸ್ಥಿತಿ ಗಂಭೀರವಾಗಿದೆ. ನಾವು ಕೇಸ್​ನ್ನು ತನಿಖೆಗೆ ಎತ್ತಿಕೊಂಡಿದ್ದೇವೆ. ಬರೀ ಪತ್ನಿ ಡ್ಯಾನ್ಸ್ ಮಾಡುತ್ತಿದ್ದಳು ಎಂಬ ಕಾರಣಕ್ಕೆ ಅವನು ಸಹೋದರರನ್ನು ಹತ್ಯೆ ಮಾಡಿದ್ದಾನೋ ಅಥವಾ ಮೊದಲೇ ಬೇರೆ ಏನಾದರೂ ವೈಷಮ್ಯ-ಗಲಾಟೆ ಇತ್ತೋ ಎಂಬುದರ ಬಗ್ಗೆ ವಿಚಾರಣೆ ನಡೆಸುತ್ತಿದ್ದೇವೆ’ ಎಂದು ಹೇಳಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!