ಹೊಸದಿಗಂತ ಡಿಜಿಟಲ್ ಡೆಸ್ಕ್
ನಸೀಬು ಗಟ್ಟಿಯಿದ್ದರೆ ಎಂತಹ ಅಪಾಯದ ಸ್ಥಿತಿಯಿಂದಲಾದರೂ ಪಾರಾಗಿ ಬರಬಹುದು ಎಂಬುದಕ್ಕೆ ಈ ವಿಡಿಯೋ ಸಾಕ್ಷಿ. ರೈಲೊಂದು ತನ್ನ ಮೇಲೆಯೇ ಹಾದುಹೋದರೂ ಪ್ರಯಾಣಿಕನೊಬ್ಬ ಪವಾಡಸದೃಶ ರೀತಿಯಲ್ಲಿ ಮೈಮೇಲೆ ಯಾವುದೇ ಗಾಯವಿಲ್ಲದೆ ಪಾರಾದ ವಿಡಿಯೋವೊಂದು ವೈರಲ್ ಆಗುತ್ತಿದೆ. ಉತ್ತರ ಪ್ರದೇಶದ ಇಟಾವಾದಲ್ಲಿರುವ ಭರ್ತನ ರೈಲ್ವೇ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ.
ಪ್ಲಾಟ್‌ಫಾರ್ಮ್‌ನಲ್ಲಿ ನಿಂತಿರುವ ಪ್ರಯಾಣಿಕರು ಚಿತ್ರೀಕರಿಸಿರುವ ವೀಡಿಯೊದಲ್ಲಿ, ರೈಲು ಹಾದುಹೋಗುವ ಸ್ಥಳದ ಬಳಿ ಹಲವಾರು ಜನರು ಜಮಾಯಿಸಿರುವುದನ್ನು ಕಾಣಬಹುದು. ಮೊದಲಿಗೆ, ಸುಮಾರು ಒಂದು ನಿಮಿಷದವರೆಗೆ ರೈಲು ಹಾಗೂ ಫ್ಲಾಟ್ ಫಾರಂ ನಡುವಿನ ಕಿರಿದಾದ ಜಾಗದಲ್ಲಿ ಸಿಕ್ಕಿಬಿದ್ದಿರುವ ಪ್ರಯಾಣಿಕ ಕಾಣಿಸುವುದಿಲ್ಲ. ಆದರೆ ಜನರು ಭಯಭೀತರಾಗಿ ಕೂಗಾಡುತ್ತಿರುವುದನ್ನು ವೀಡಿಯೋದಲ್ಲಿ ಕೇಳಬಹುದಾಗಿದೆ.
Viral Video : Train passed over a man at Bharthana railway station in Etawah as death…, watch breath-taking video pic.twitter.com/eHtn1LcN1A
— santosh singh (@SantoshGaharwar) September 6, 2022
ರೈಲು ಸಾಗಿದ ಬಳಿಕ ಆಶ್ಚರ್ಯಕರ ರೀತಿಯಲ್ಲಿ ಪ್ರಯಾಣಿಕ ಯಾವುದೇ ಗಾಯಗಳಾಗದೆ ಎದ್ದಿದ್ದಾನೆ. ಅಲ್ಲಿಯವರೆಗೆ ಉಸಿರು ಬಿಗಿಹಿಡಿದು ನೋಡುತ್ತಿದ್ದ ಜನರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ರೈಲು ತನ್ನನ್ನು ದಾಟಿದ ನಂತರ ವ್ಯಕ್ತಿ ಎದ್ದು ತನ್ನ ಕೈಗಳನ್ನು ಮಡಚಿ ತನ್ನನ್ನು ಜೀವಂತವಾಗಿರಿಸಿದ ದೇವರಿಗೆ ಧನ್ಯವಾದ ಸಲ್ಲಿಸುತ್ತಾನೆ. ಈ ವಿಡಿಯೋ ಈಗ ಸಾಕಷ್ಟು ವೈರಲ್ ಆಗುತ್ತಿದೆ.