May 16, 2026
Saturday, May 16, 2026
spot_img

ಕೇವಲ 2 ಸಾವಿರ ಬಾಡಿಗೆಗಾಗಿ ಪತ್ನಿ- ಮಗಳ ಮೇಲೆ ಅತ್ಯಾಚಾರ ಮಾಡೋಕೆ ಬಿಟ್ಟು ಕೊಟ್ಟ ಪಾಪಿ ಪತಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಮನೆ ಬಾಡಿಗೆ ಪಾವತಿಸಲು ಸಾಧ್ಯವಾಗದ ಕಾರಣಕ್ಕೆ ವ್ಯಕ್ತಿಯೊಬ್ಬ ತನ್ನ ಮನೆ ಮಾಲೀಕ ಮತ್ತು ಆತನ ಸಂಬಂಧಿಕನಿಗೆ ತನ್ನ ಪತ್ನಿ ಹಾಗೂ 13 ವರ್ಷದ ಮಗಳ ಮೇಲೆ ಪದೇ ಪದೇ ಅತ್ಯಾಚಾರ ಎಸಗಲು ಅವಕಾಶ ಮಾಡಿಕೊಟ್ಟ ಆಘಾತಕಾರಿ ಘಟನೆಯೊಂದು ಗುಜರಾತ್‌ನ ಮೋರ್ಬಿಯಲ್ಲಿ ಬೆಳಕಿಗೆ ಬಂದಿದೆ.

ಈ ಸಂಬಂಧ ಸಂತ್ರಸ್ತ ಮಹಿಳೆಯ ತಾಯಿ ಮೇ 1 ರಂದು ಮೋರ್ಬಿ ಸಿಟಿ ‘ಎ’ ಡಿವಿಷನ್ ಪೊಲೀಸ್ ಠಾಣೆಯಲ್ಲಿ ಪತಿ, ಮನೆ ಮಾಲೀಕ ಮತ್ತು ಆತನ ಸಂಬಂಧಿಕನ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS) ಮತ್ತು ಪೋಕ್ಸೋ (POCSO) ಕಾಯ್ದೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ದೂರು ದಾಖಲಿಸಿದ್ದಾರೆ.

ಈ ಘಟನಾ ಸಂಬಂಧ ಗುರುವಾರ, 55 ವರ್ಷದ ಮನೆ ಮಾಲೀಕನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಒಂದು ದಿನದ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿತ್ತು. ಆತನ ರಿಮಾಂಡ್ ಅವಧಿ ಮುಗಿದ ನಂತರ, ಆತನನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ. ಈಗಾಗಲೇ ಆರೋಪಿಯನ್ನು ಬಂಧಿಸಲಾಗಿದೆ. ಈ ಅಪರಾಧಕ್ಕೆ ಪ್ರಚೋದನೆ ನೀಡಿದ ಮನೆ ಮಾಲೀಕನ ಕುಟುಂಬದ ಸದಸ್ಯರು ಮತ್ತು ಸಹ-ಆರೋಪಿಗಳು ತಲೆಮರೆಸಿಕೊಂಡಿದ್ದಾರೆ. ಅವರಿಗಾಗಿ ಹುಡುಕಾಟ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸದ್ಯ ಪೊಲೀಸರು ಘಟನಾ ಸ್ಥಳದ ಭೇಟಿ ನೀಡಿ, ಸಂತ್ರಸ್ತರು ಹಾಗೂ ಆರೋಪಿಗಳ ವೈದ್ಯಕೀಯ ಪರೀಕ್ಷೆಯನ್ನು ಪೂರ್ಣಗೊಳಿಸಿ, ಕೆಲವು ವೈಜ್ಞಾನಿಕ ಸಾಕ್ಷ್ಯಗಳನ್ನೂ ಸಹ ಸಂಗ್ರಹಿಸಿದ್ದಾರೆ.

ಸಂತ್ರಸ್ತರ ತಾಯಿ ನೀಡಿರುವ ದೂರಿನ ಪ್ರಕಾರ, ಈ ಕುಟುಂಬವು ಆರು ತಿಂಗಳ ಹಿಂದೆ ಕೆಲಸಕ್ಕಾಗಿ ಮೋರ್ಬಿಗೆ ಬಂದಿತ್ತು. ಆರೋಪಿಯು ತಿಂಗಳಿಗೆ 2000 ರೂ. ಬಾಡಿಗೆಗೆ ಮನೆ ಪಡೆದಿದ್ದನು. ವ್ಯವಹಾರವು ಸರಿಯಾಗಿ ನಡೆಯದ ಕಾರಣ, ಬಾಡಿಗೆ ಹಣ ಬಾಕಿ ಉಳಿದಿತ್ತು. ಬಾಡಿಗೆದಾರ ಒಪ್ಪಿಗೆ ನೀಡಿದ ನಂತರ ಆತನ ಪತ್ನಿ ಮತ್ತು 13 ವರ್ಷದ ಅಪ್ರಾಪ್ತ ಮಗಳ ಮೇಲೆ ಪದೇ ಪದೇ ಅತ್ಯಾಚಾರ ಎಸಗಿದ್ದಾನೆ. ಮನೆ ಮಾಲೀಕನ ಸಂಬಂಧಿಕನೂ ಸಹ ತನ್ನ ಮಗಳ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಆರೋಪಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !