ಹೊಸದಿಗಂತ ಡಿಜಿಟಲ್ ಡೆಸ್ಕ್:
ಜೀವನದ ಬಂಡಿ ಸುಲಭದಲ್ಲಿ ಸಾಗೋದಲ್ಲ, ಬೆವರು ಹರಿಸಿದರಷ್ಟೇ ತುತ್ತು ಅನ್ನ ಹೊಟ್ಟೆಗೆ ಬೀಳೋದು. ಸುಖವಾಗಿ ಬೆಲೇಯುವವರೂ ಇದ್ದಾರೆ ಇದು ಅವರಿಗೆ ಅನ್ವಯಿಸೋದಲ್ಲ ಬಿಡಿ…ಪ್ರತಿಯೊಂದು ರೂಪಾಯಿ ಗಳಿಸಲು ಕಷ್ಟಪಡುವ ಜನರ ಬದುಕಿನ ಮಾತಿದು. ಕೆಲವೊಮ್ಮೆ ಈ ಒಂದು ರೂಪಾಯಿ ಗಳಿಸಲು ಪ್ರಾಣ ಹೋಗಲೂಬಹುದು. ಇಂಥದ್ದೇ ವಿಡಿಯೋ ಇದೀಗ ವೈರಲ್ ಆಗುತ್ತಿದೆ.
ರೈಲ್ವೆ ನಿಲ್ದಾಣದಲ್ಲಿ ನೀರಿನ ಬಾಟೆಲ್, ಆಹಾರ, ತಿನಿಸು ಮಾರುವವರನ್ನು ಕಂಡಿರುತ್ತೇವೆ. ಕೆಲವೊಮ್ಮೆ ರೈಲು ಚಲಿಸುತ್ತಿದ್ದರೂ ಹೊಟ್ಟೆ ಪಾಡಿಗಾಗಿ ಸಾಹಸ ದೃಶ್ಯಗಳೂ ಕಣ್ಣಿಗೆ ಬೀಳುತ್ತವೆ. ಅಂತೆಯೇ ಇಲ್ಲಿಯೂ ಒಬ್ಬ ವ್ಯಕ್ತಿ ನೀರಿನ ಬಾಟೆಲ್‌ಗಳನ್ನಿಡಿದು ಚಲಿಸುವ ರೈಲನ್ನು ಹತ್ತಲು ಪ್ರಯತ್ನಿಸುತ್ತಾನೆ. ಆದರೆ ಆಯತಪ್ಪಿ, ಕೆಳಗೆ ಬೀಳುವ ದೃಶ್ಯ ಭಯಾನಕವಾಗಿದೆ. ಅದೃಷ್ಟವಶಾತ್ ಅವರ ದೇಹವು ರೈಲಿನ ಚಕ್ರಗಳ ಅಡಿಯಲ್ಲಿ ಬೀಳಲಿಲ್ಲ.
ಈ ವೀಡಿಯೊವನ್ನು Instagram ನಲ್ಲಿ addiction4success ಎಂಬ ಖಾತೆಯಿಂದ ಹಂಚಿಕೊಳ್ಳಲಾಗಿದೆ. ಸ್ವಲ್ಪ ಆಯ ತಪ್ಪಿದ್ದರೂ ಮನೆಯಲ್ಲಿ ಕಾಯುತ್ತಿರುವವರ ಪಾಲಿಗೆ ಅಂದು ಕರಾಳ ದಿನ ಆಗಿರುತ್ತಿತ್ತು.