ಸ್ಕೂಟರ್‌ ಸೀಟಿನ ಮೇಲೆ ದೋಸೆ ಹಾಕಿ ವಿನೂತನ ಪ್ರಯತ್ನ, ವಿಡಿಯೊ ವೈರಲ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಏರುತ್ತಿರುವ ಬಿಸಿಲಿನ ತಾಪಮಾನಕ್ಕೆ ಜನ ಹೈರಾಣಾಗುತ್ತಿದ್ದಾರೆ. ಹೈದರಾಬಾದ್‌ನಲ್ಲಿ ಯಾವ ಪರಿ ಬಿಸಿಲಿದೆ ಎಂಬುದನ್ನು ಸಾಬೀತು ಮಾಡಲು ಜನ ವಿನೂತನ ಐಡಿಯಾಗಳನ್ನು ಬಳಕೆ ಮಾಡುತ್ತಿದ್ದಾರೆ. ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿರುವ ವಿಡಿಯೋದಲ್ಲಿ ವ್ಯಕ್ತಿಯೊಬ್ಬ ತನ್ನ ವೆಸ್ಪಾ ಸ್ಕೂಟರ್‌ನ ಸೀಟಿನ ಮೇಲೆ ದೋಸೆ ಹಾಕಿ ಅದಕ್ಕೆ ವೆಸ್ಪಾ ದೋಸೆ ಎಂದು ಹೆಸರಿಟ್ಟಿದ್ದಾರೆ.

ತನ್ನ ಸ್ಕೂಟರ್‌ನ ಸೀಟಿಗೆ ದೋಸೆ ಹಿಟ್ಟನ್ನು ಸುರಿದು, ಬಿಸಿಲಿನಲ್ಲೇ ಬೇಯಿಸಿದ್ದಾನೆ. ಒಮ್ಮೆ ಅದನ್ನು ತಿರುವು ಹಾಕಿದ್ದಾನೆ ಥೇಟ್‌ ದೋಸೆಯಂತೆಯೇ ಅಚ್ಚುಕಟ್ಟಾಗಿ ಬೆಂದಿದೆ. 40 ಡಿಗ್ರಿ ತಾಪಮಾನದ ಬಿಸಿಲು ವ್ಯರ್ಥವಾಗುವ ಬದಲು ಅದನ್ನು ಈ ರೀತಿ ವೆಸ್ಪಾ ದೋಸೆ ಮಾಡಲು ಬಳಸಿಕೊಳ್ಳಬಹುದು ಎಂದು ಇನ್‌ಸ್ಟಾಗ್ರಾಂನಲ್ಲಿ ಶೀರ್ಷಿಕೆ ನೀಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!