October 10, 2026
Saturday, October 10, 2026
spot_img

ನಟಿ ಕಾವ್ಯಾ ಶೈವ ಮಾತನಾಡುತ್ತಿರುವಾಗಲೇ ಮೈಕ್‌ ಕಿತ್ತುಕೊಂಡ ವ್ಯಕ್ತಿ! ಫ್ಯಾನ್ಸ್‌ ಗರಂ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಬಿಗ್‌ಬಾಸ್‌ನಲ್ಲಿ ಖ್ಯಾತಿ ಪಡೆದಿರುವ ನಟಿ ಕಾವ್ಯಾ ಶೈವ ಕಲಬುರಗಿಯಲ್ಲಿ ಕಾರ್ಯಕ್ರಮವೊಂದಕ್ಕೆ ಭೇಟಿ ಕೊಟ್ಟ ವೇಳೆ ಅವರಿಗೆ ಅವಮಾನ ಮಾಡಲಾಗಿದೆ ಎಂದು ಅಭಿಮಾನಿಗಳು ಗರಂ ಆಗಿದ್ದಾರೆ.

ಕಾವ್ಯಾ ಇನ್ನೂ ಮಾತನಾಡುತ್ತಿರುವಾಗಲೇ ವ್ಯಕ್ತಿಯೊಬ್ಬರು ಅವರ ಕೈಯಿಂದ ಮೈಕ್‌ ಕಿತ್ತುಕೊಂಡಿದ್ದಾರೆ. ಇದಕ್ಕೆ ಕಾವ್ಯಾ ಶಾಕ್‌ ಆಗಿದ್ದಾರೆ. ಆದರೆ ಏನೂ ಹೇಳದೇ ಸುಮ್ಮನೇ ನಿಂತಿದ್ದಾರೆ. ಈ ಘಟನೆಯನ್ನು ಸಂಘಟಿಕರು ಖಂಡಿಸಿದ್ದಾರೆ. ಮೈಕ್‌ ಕಿತ್ತುಕೊಂಡ ವ್ಯಕ್ತಿ ಹಾಗೂ ಸಂಘಟಿಕರ ನಡುವೆ ಮಾತಿನ ಚಕಮಕಿ ನಡೆದಿದೆ.

ಕಲಬುರಗಿಯ ಕಾರ್ಯಕ್ರಮದಲ್ಲಿ ವ್ಯವಸ್ಥೆ ಸರಿಯಾಗಿರಲಿಲ್ಲ. ವೇದಿಗೆ ಮೇಲೆಯೇ ಮೂವತ್ತರಿಂದ ನಲವತ್ತು ಮಂದಿ ನಿಂತಿದ್ದಾರೆ. ನಟಿಗೆ ನಿಲ್ಲೋದಕ್ಕೆ ಜಾಗ ಇಲ್ಲ. ಅದರಲ್ಲಿಯೂ ಯಾವ ಕಿರಿಕಿರಿ ಮಾಡದೇ ಕಾವ್ಯ ಸುಮ್ಮನಿದ್ದಾರೆ. ಆನಂತರ ಅವರಿಗೆ ಮಾತನಾಡಲು ಅವಕಾಶ ನೀಡಲಾಗಿದೆ. ಆ ಅವಕಾಶದ ವೇಳೆಯೇ ವ್ಯಕ್ತಿಯೊಬ್ಬ ಬಂದು ಮೈಕ್‌ ಕಿತ್ತುಕೊಂಡಿದ್ದಾನೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

Must Read