ಜೋ ಬಿಡನ್‌ಗೆ ಜೀವ ಬೆದರಿಕೆಯೊಡ್ಡಿದ್ದ ವ್ಯಕ್ತಿ ಎಫ್‌ಬಿಐ ದಾಳಿಯಲ್ಲಿ ಹತ್ಯೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಅಮೆರಿಕ ಅಧ್ಯಕ್ಷ ಜೋ ಬಿಡೆನ್‌ಗೆ ಜೀವ ಬೆದರಿಕೆ ಹಾಕಿದ್ದ ʻರಾಬರ್ಟ್ʼ‌ ಎಂಬ ವ್ಯಕ್ತಿಯನ್ನು ಬುಧವಾರ ಎಫ್‌ಬಿಐ ಏಜೆಂಟ್‌ಗಳು ಗುಂಡಿಕ್ಕಿ ಹತ್ಯೆಗೈದರು. ಅಧ್ಯಕ್ಷರ ಪಶ್ಚಿಮ ರಾಜ್ಯದ ಪ್ರವಾಸಕ್ಕೆ ಕೆಲವೇ ಗಂಟೆಗಳ ಮೊದಲು ಈ ಘಟನೆ ನಡೆದಿದೆ.

ಸಾಲ್ಟ್ ಲೇಕ್ ಸಿಟಿಯ ದಕ್ಷಿಣದ ಪ್ರೊವೊದಲ್ಲಿನ ನಿವಾಸದಲ್ಲಿ ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್(ಎಫ್‌ಬಿಐ) ಶೋಧ ಕಾರ್ಯಾಚರಣೆ ವೇಳೆ ಶಸ್ತ್ರಸಜ್ಜಿತ ವ್ಯಕ್ತಿ ಸಾವನ್ನಪ್ಪಿರುವುದಾಗಿ ದೃಢಪಡಿಸಿದರು.

ಉತಾಹ್‌ನಲ್ಲಿರುವ ಫೆಡರಲ್ ಪ್ರಾಸಿಕ್ಯೂಟರ್‌ಗಳು ದಾಖಲು ಮಾಡಿಕೊಂಡ ದೂರಿನಲ್ಲಿ‌ ಶಂಕಿತ ಆರೋಪಿಯನ್ನು ರಾಬರ್ಟ್‌ಸನ್ ಎಂದು ಹೆಸರಿಸಿ, ತನಿಖೆ ಕೈಗೊಂಡಿದ್ದಾರೆ. ಈತ ತನ್ನ ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳಲ್ಲಿ ಪದೇ ಪದೇ ಬಿಡೆನ್ ಹಾಗೂ ಇತರರಿಗೆ ಜೀವ ಬೆದರಿಕೆ ಹಾಕಿದ್ದರು. ʻನನ್ನ M24 ಸ್ನೈಪರ್ ರೈಫಲ್ ಅನ್ನು ಸ್ವಚ್ಛಗೊಳಿಸಿದ್ದೇನೆ. ಬಿಡೆನ್ ಜೊತೆಗೆ, ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಮತ್ತು ಯುಎಸ್ ಅಟಾರ್ನಿ ಜನರಲ್ ಮೆರಿಕ್ ಗಾರ್ಲ್ಯಾಂಡ್ ಅವರನ್ನೂ ಕೊಲೆ ಮಾಡುತ್ತೇನೆʼ ಎಂದು ಬೆದರಿಕೆ ಹಾಕಿದ್ದ.

ಅಷ್ಟೇ ಅಲ್ಲದೆ, ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪೋರ್ನ್ ಸ್ಟಾರ್‌ಗೆ ಪಾವತಿಸಿದ ಆರೋಪದ ಮೇಲೆ ದೋಷಾರೋಪಣೆ ಮಾಡಿದ ಮ್ಯಾನ್‌ಹ್ಯಾಟನ್ ಡಿಸ್ಟ್ರಿಕ್ಟ್ ಅಟಾರ್ನಿ ಆಲ್ವಿನ್ ಬ್ರಾಗ್ ಅವರನ್ನೂ ಶೂಟ್ ಮಾಡುವುದಾಗಿ ರಾಬರ್ಟ್ ಬೆದರಿಕೆ ಹಾಕಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!