ದಿನಭವಿಷ್ಯ| ಸಾಧಿಸಲು ಬಯಸುವ ಉದ್ದೇಶವೊಂದು ಸಫಲವಾಗಿ ಈಡೇರುವುದು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಮೇಷ
ಪ್ರಗತಿಪರ ದಿನ. ಅಡ್ಡಿ ಆತಂಕಗಳನ್ನು ನಿವಾರಿಸಿಕೊಳ್ಳುವಿರಿ. ಕಾರ್ಯ ಸಾಧನೆ. ಪ್ರೀತಿಯ ವಿಷಯದಲ್ಲಿ ಮಾತ್ರ ಹಿನ್ನಡೆ ಎದುರಿಸುವಿರಿ.

ವೃಷಭ
ಕ್ರಿಯಾತ್ಮಕ ಚಟುವಟಿಕೆ ಗಳಲ್ಲಿ ಯಶಸ್ಸು. ವೃತ್ತಿಯಲ್ಲಿ ಹೊಂದಾಣಿಕೆ ಮುಖ್ಯ. ಇಲ್ಲವಾದರೆ ಸಮಸ್ಯೆ. ಸಂಗಾತಿ ಜತೆ ಮನಸ್ತಾಪ, ಸಂಬಂಧ ಹಾಳು.

ಮಿಥುನ
ಕೆಲಸದ ಒತ್ತಡ. ಸಹೋದ್ಯೋಗಿಗಳ ಜತೆ ಸಂವಹನದ ಕೊರತೆ. ಹಣಕ್ಕೆ ಸಂಬಂಧಿಸಿ ಮಹತ್ವದ ವ್ಯವಹಾರ ಇಂದು ನಡೆಸದಿರಿ. ಕಾದು ನೋಡಿರಿ.

ಕಟಕ
ಕೆಲಸದ ಒತ್ತಡ ನಿವಾರಣೆ. ಇದರಿಂದ ನಿರಾಳತೆ. ಪ್ರೀತಿಪಾತ್ರರ ಜತೆ ಹೆಚ್ಚು ಕಾಲ ಕಳೆಯಲು ಅವಕಾಶ ದೊರಕಲಿದೆ. ಕೌಟುಂಬಿಕ ನೆಮ್ಮದಿ.

ಸಿಂಹ
ಸಾಧಿಸಲು ಬಯಸುವ ಉದ್ದೇಶವೊಂದು ಸಫಲವಾಗಿ ಈಡೇರುವುದು. ಅನಿರೀಕ್ಷಿತ ನೆರವೂ ಒದಗುವುದು. ಆರ್ಥಿಕ ಸ್ಥಿತಿ ಸುಸ್ಥಿರ.

ಕನ್ಯಾ
ಬಾಕಿ ಉಳಿದಿರುವ ಕೆಲಸಗಳನ್ನು ಮೊದಲು ಮಾಡಿ ಮುಗಿಸಿ. ಏಕೆಂದರೆ ಹೊಸ ಕೆಲಸದ ಹೊರೆ ಬೀಳಲಿದೆ. ಮನಸನ್ನು ನಿರಾಳವಾಗಿ ಇಟ್ಟುಕೊಳ್ಳಿ.

ತುಲಾ
ಪ್ರೀತಿಯ ವಿಷಯಕ್ಕೆ ಹೆಚ್ಚು ಆದ್ಯತೆ ಕೊಡುವಿರಿ. ಸಂಬಂಧವನ್ನು ಚೆನ್ನಾಗಿ ಇಟ್ಟುಕೊಳ್ಳಲು ಗಮನ ಕೊಡಿ. ಚುಚ್ಚುಮಾತು, ವ್ಯಂಗ್ಯ ಬಿಟ್ಟುಬಿಡಿ.

ವೃಶ್ಚಿಕ
ಖಾಸಗಿ ವಿಷಯಕ್ಕೆ ಸಂಬಂಧಿಸಿ ನಿಮ್ಮ ಆದ್ಯತೆಯ ಕುರಿತು ಸ್ಪಷ್ಟತೆಯಿರಲಿ. ಇತರರನ್ನು ಅರ್ಥ ಮಾಡಿಕೊಳ್ಳಲು ಸೋಲದಿರಿ. ಸಂವಹನ ಚೆನ್ನಾಗಿರಲಿ.

ಧನು
ಖಾಸಗಿ ಬದುಕು ಮತ್ತು ವೃತ್ತಿ ಬದುಕಿನಲ್ಲಿ ತೃಪ್ತಿಕರ ಬೆಳವಣಿಗೆ. ನೀವು ತೆಗೆದುಕೊಳ್ಳುವ ನಿರ್ಧಾರ ಫಲ ನೀಡುವುದು. ಆಪ್ತರಿಂದ ಸಹಕಾರ, ಬೆಂಬಲ.

ಮಕರ
ಕೆಲಸದಲ್ಲಿ ಹೆಚ್ಚು ಜಾಗ್ರತೆ ವಹಿಸಿರಿ. ಹೆಚ್ಚು ವೃತ್ತಿಪರವಾಗಿ ಪರಿಸ್ಥಿತಿ ನಿಭಾಯಿಸಿ. ಆತ್ಮೀಯ ಸಂಬಂಧದಲ್ಲಿ  ಬಿರುಕು ಉಂಟಾದೀತು. ಹೊಂದಾಣಿಕೆ ಮುಖ್ಯ.

ಕುಂಭ
ವೃತ್ತಿಪರ ಸಮಸ್ಯೆಯೊಂದು ಪರಿಹಾರ ಕಾಣುವುದು.  ಸಮಸ್ಯೆ ಸೃಷ್ಟಿಸುತ್ತಿದ್ದವರು ನಿಮ್ಮ ಜತೆಗೂಡುವರು. ಕೌಟುಂಬಿಕ ಪರಿಸ್ಥಿತಿ ನೆಮ್ಮದಿ ಕಾಣುವುದು.

ಮೀನ
ಏರುಪೇರಿನ ದಿನ. ಹೆಚ್ಚುವರಿ ಕಾಯ. ನೆಮ್ಮದಿ ಹಾಳು. ವೃತ್ತಿಯಲ್ಲಿ ಮತ್ತು ಪ್ರೀತಿಯ ವಿಷಯದಲ್ಲಿ ಕಠಿಣ ಸವಾಲು ಎದುರಿಸುವಿರಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!