ಕೇಂದ್ರ ಸರಕಾರದಿಂದ ಕೋವಿಡ್ ನಿರ್ವಹಣೆ: ಪ್ರಹ್ಲಾದ್ ಜೋಶಿ

ಹೊಸದಿಗಂತ ವರದಿ, ಹಾವೇರಿ:

ಕೋವಿಡ್ ಸಮಸ್ಯೆಗಳನ್ನು ಸಮರ್ಪಕವಾಗಿ ನಿರ್ವಹಣೆ ಮಾಡಿದ ಕೀರ್ತಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ ಸಲ್ಲುತ್ತದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು.
ಜಿಲ್ಲೆಯ ಶಿಗ್ಗಾಂವ ತಾಲ್ಲೂಕಿನ ಬಾಡ ಗ್ರಾಮದಲ್ಲಿ ಜಿಲ್ಲಾಧಿಕಾರಿಗಳ ನಡೆ ಹಳ್ಳಿಗಳ ಕಡೆಯ ಕಂದಾಯ ಸಚಿವರ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಪಕ್ಕದ ಚೀನಾ ಸೇರಿದಂತೆ ವಿಶ್ವದ ವಿವಿಧ ಶ್ರೀಮಂತ ರಾಷ್ತ್ರಗಳು ಕೋವಿಡ್ ಸಮಸ್ಯೆಗಳನ್ನು ಇನ್ನೂ ಎದುರಿಸುತ್ತಿವೆ. 135 ಕೋಟಿ ಜನಸಂಖ್ಯೆ ಹೊಂದಿರುವ ಭಾರತದಲ್ಲಿ ಕೋವಿಡ್ ಸಮಸ್ಯೆ ಹೆಚ್ಚಾಗಿಲ್ಲಾ. ಇದಕ್ಕೆ ಪ್ರಮುಖ ಕಾರಣ ಕೇಂದ್ರದ ನರೇಂದ್ರ ಮೋದಿ ಸರ್ಕಾರ ಉಚಿತವಾಗಿ ವ್ಯಾಕ್ಸೀನ್ ನೀಡಿದ್ದಾಗಿದೆ. ವಿಶ್ವದ ಬೇರೆ ಯಾವುದೇ ರಾಷ್ಟ್ರಗಳು ಇಷ್ಟೊಂದು ಪ್ರಮಾಣದಲ್ಲಿ ಉಚಿತವಾಗಿ ವ್ಯಾಕ್ಸಿನ್ ನೀಡಿಲ್ಲ.ಇದನ್ನು ಭಾರತೀಯರು ಹೇಳುತ್ತಿಲ್ಲ. ಆಸ್ಟ್ರೇಲಿಯಾ ಉದ್ಯಮಿಯೊಬ್ಬರ ವಿಶ್ವದ ವೇದಿಕೆಯಲ್ಲಿ ಬಹಿರಂಗವಾಗಿ ಹೇಳಿದ್ದಾರೆ ಎಂದರು.
ಇದು ಭಾರತಕ್ಕೆ ಹೆಮ್ಮೆಯ ವಿಷಯ ಎಂದರು. ಕೋವಿಡ್ ನಿರ್ವಹಣೆಯಲ್ಲಿ ಭಾರತ ನಂಬರ್ ಒನ್ ಸ್ಥಾನ ಪಡೆದಿದ್ದೇವೆ. ದೇಶದ ಜನರಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹಲವಾರು ಯೋಜನೆಗಳನ್ನು ಜಾರಿಗೆ ತರುತ್ತಿವೆ.ದೇಶದ ಎಲ್ಲಾ ವಿಚಾರಗಳಲ್ಲಿಯೂ ಸುಭದ್ರವಾಗಿದೆ ಎಂದರು.
ಕರಿ ಕಂಬಳಿ ಹಾಕಿಕೊಂಡು ನಾನು ಅಹಿಂದಾ ಅಂತಾ ಹೇಳಿದವರು ಕುರಿ ಕೊಡಲಿಲ್ಲ. ಕುರಿ ಕಾಯುವವನಿಗೆ ಕುರಿ ಕೊಡುವುದರ ಜೊತೆಗೆ ಹಣ ಕೊಟ್ಟವರು ರಾಜ್ಯದ ಸಿಎಂ ಬೊಮ್ಮಾಯಿ ಅವರಾಗಿದ್ದಾರೆ. ಮೊದಲು ಕೊಡುತ್ತಿದ್ದ ಯೋಜನೆಗಳು ಜನರಿಗೆ ಸರಿಯಾಗಿ ಮುಟ್ಟುತ್ತಿರಲಿಲ್ಲ. ಇವತ್ತು ಡಿಬಿಟಿ ಮೂಲಕ ನೇರವಾಗಿ ಹಣ ಸಂದಾಯ ಪದ್ದತಿ ಪ್ರಾರಂಭವಾಗಿದೆ.ಯುಪಿಎ ಕಾಲದಲ್ಲಿ ದಿನಕ್ಕೊಂದು ಹಗರಣ ಬರುತ್ತಿತ್ತು.ಇವತ್ತು ಬದಲಾವಣೆ ಆಗಿದೆ.ರಾಜ್ಯದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಹಲವು ಯೋಜನೆ ಜಾರಿಗೆ ತಂದಿದ್ದೇವೆ. ಡಬಲ್ ಇಂಜಿನ್ ಸರಕಾರದ ಲಾಭ ಜನರಿಗೆ ತಲುಪುತ್ತಿವೆ. ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ನೀವು ನಮಗೆ ಆಶೀರ್ವಾದ ಮಾಡಿರಿ.
ಬೊಮ್ಮಾಯಿಯವರು‌ ಶಾಸಕರಾದಾಗ,ಮೊದಲ ಸಲ ಜೋರಾಗಿ ಬಟನ್ ಒತ್ತಿದಾಗ ನೀರಾವರಿ ಸಚಿವರಾದರು.
ಎರಡನೇ ಸಲಾ ನೀವು ಒತ್ತಿದಾಗ ಎನೋ ಸಮಸ್ಯೆಯಾಗಿ ವಿರೋದಪಕ್ಷದಲ್ಲಿದ್ದರು.ಮೂರನೇ ಸಲ ಜಬರದಸ್ಸ್ ಒತ್ತಿದಿರಿ ಗೃಹ ಮಂತ್ರಿಯಾಗಿ ರಾಜ್ಯದ ಮುಖ್ಯಮಂತ್ರಿಗಳಾದರು. ನಮ್ಮ ಕ್ಷೇತ್ರದ ಎಲ್ಲಾ ಸರ್ಕಾರಿ ಪ್ರಾಥಮಿಕ, ಪ್ರೌಢ ಹಾಗೂ ಕಾಲೇಜುಗಳಿಗೆ ಬಣ್ಣ ಹಚ್ಚುವ ಕೆಲಸ ಶೀಘ್ರವಾಗಿ ಮಾಡಲಾಗುವುದು ಎಂದು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ಸಾಧನೆಗಳನ್ನು ಹೇಳಿದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ,ಕಂದಾಯ ಸಚಿವ ಆರ್ ಅಶೋಕ ಮಾತನಾಡಿದರು. ವೇದಿಕೆಯ ಅರಬೈಲ್ ಶಿವರಾಂ ಹೆಬ್ಬಾರ,ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ, ಅರುಣಕುಮಾರ ಗುತ್ತೂರ,ಮಾಜಿಶಾಸಕ ಶಿವರಾಜ ಸಜ್ಜನ, ಜಿಲ್ಲಾಧಿಕಾರಿ ರಘುನಂದನ ಮೂರ್ತಿ,ಜಿಪಂ ಸಿಇಓ ಮಹಮ್ಮದ್ ರೋಷನ್ ಸೇರಿ ಇತರರು ಇದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!