Thursday, June 1, 2023

Latest Posts

SHOCKING VIDEO| ಕಳ್ಳತನದ ಶಂಕೆಯಿಂದ ಹಿಗ್ಗಾಮುಗ್ಗ ಥಳಿಸಿ ಕೊಂದ ಪಾಪಿಗಳು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

32 ವರ್ಷದ ವ್ಯಕ್ತಿಯನ್ನು ಕಳ್ಳತನದ ಶಂಕೆಯಿಂದ ಮಾಲೀಕನ ಆದೇಶದ ಮೇರೆಗೆ ಹೊಡೆದು ಕೊಂದಿರುವ ಭಯಾನಕ ಘಟನೆ ಉತ್ತರ ಪ್ರದೇಶದ ಶಹಜಹಾನ್‌ಪುರದಲ್ಲಿ ನಡೆದಿದೆ. ಕೊಲೆ ಮಾಡಿದ ಬಳಿಕ ಆತನ ಶವವನ್ನು ಸರ್ಕಾರಿ ಆಸ್ಪತ್ರೆಯಲ್ಲಿ ಬಿಸಾಡಲಾಗಿದೆ. ಶಹಜಹಾನ್‌ಪುರದ ಇಬ್ಬರು ಪ್ರಮುಖ ಉದ್ಯಮಿಗಳಾದ ಬಂಕಿಮ್ ಸೂರಿ ಮತ್ತು ನೀರಜ್ ಗುಪ್ತಾ ಕೊಲೆ ಆರೋಪ ಹೊತ್ತಿದ್ದಾರೆ. ಶಿವಂ ಜೋಹ್ರಿ ಟ್ರಾನ್ಸ್‌ಪೋರ್ಟರ್ ಬಂಕಿಮ್ ಸೂರಿಯ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದರು. ಇತ್ತೀಚೆಗೆ ಕನ್ಹಿಯಾ ಹೊಸೈರಿಯ ಪೊಟ್ಟಣ ನಾಪತ್ತೆಯಾಗಿತ್ತು ಕಳ್ಳತನದ ಶಂಕೆಯ ಮೇಲೆ ಹಲವಾರು ಸಾರಿಗೆ ನೌಕರರ ಮೇಲೆ ದಾಳಿ ನಡೆಸಲಾಯಿತು. ದಾಳಿಯ ವೀಡಿಯೋ ವೈರಲ್ ಆದ ನಂತರ ಕೊಲೆ ಪ್ರಕರಣದಲ್ಲಿ ಏಳು ಜನರನ್ನು ಹೆಸರಿಸಲಾಗಿದೆ. ವೀಡಿಯೋದಲ್ಲಿ, ಶಿವಂ ನೋವಿನಿಂದ ನರಳುತ್ತಿರುವುದನ್ನು ಒಬ್ಬ ವ್ಯಕ್ತಿ ಪದೇ ಪದೇ ರಾಡ್‌ನಿಂದ ಹೊಡೆದಿದ್ದಾನೆ.

ಪೊಲೀಸರ ಪ್ರಕಾರ, ಮಂಗಳವಾರ ರಾತ್ರಿ ಶಿವಂ ಅವರ ದೇಹವನ್ನು ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಬಿಸಾಕಿದ್ದಾರೆ. ಅಲ್ಲಿ ಅವರ ಕುಟುಂಬ ಸದಸ್ಯರು ವಿದ್ಯುತ್ ಸ್ಪರ್ಶದಿಂದ ಸಾವನ್ನಪ್ಪಿದ್ದಾರೆ ಎಂದು ಹೇಳಿದರು. ಪೊಲೀಸ್ ಅಧಿಕಾರಿಯೊಬ್ಬರು ಆಸ್ಪತ್ರೆಯಲ್ಲಿ ಮೃತದೇಹವನ್ನು ಪರೀಕ್ಷಿಸಿದಾಗ ವಿದ್ಯುತ್ ಸ್ಪರ್ಶವಾಗಿಲ್ಲ ಎಂದು ತಿಳಿದುಬಂದಿದೆ. ಗಾಯಗಳಿಂದ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದ್ದು, ಆ ಬಳಿಕ ತನಿಖೆ ಆರಂಭವಾಯಿತು. ಶಿವಂ ಕಳೆದ ಏಳು ವರ್ಷಗಳಿಂದ ಸಾರಿಗೆ ಉದ್ಯಮಿ ಬಂಕಿಮ್ ಸೂರಿ ಅವರ ಬಳಿ ಕೆಲಸ ಮಾಡುತ್ತಿದ್ದರು ಎಂಬುದು ಈವರೆಗಿನ ತನಿಖೆಯಿಂದ ತಿಳಿದುಬಂದಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!