ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯ ಚುನಾವಣೆಗೆ ಭರದ ಸಿದ್ಧತೆ ನಡೆಯುತ್ತಿದ್ದು, ಇದರ ಬೆನ್ನಲ್ಲೇ ಬಿಜೆಪಿ ಚುನಾವಣಾ (Karnataka Election) ಉಸ್ತುವಾರಿಯಾಗಿ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಮತ್ತು ಸಹ ಉಸ್ತುವಾಗಿ ತಮಿಳುನಾಡು ರಾಜ್ಯ ಬಿಜೆಪಿ ಅಧ್ಯಕ್ಷರಾಗಿರುವ ಅಣ್ಣಾಮಲೈ ಅವರನ್ನು ನೇಮಕ ಮಾಡಿದ್ದು, ಇದೀ,ಇನ್ನೊಬ್ಬ ಸಹ ಉಸ್ತುವಾರಿಯನ್ನು ನೇಮಿಸಿ ಪ್ರತ್ಯೇಕ ಆದೇಶ ಹೊರಡಿಸಿದೆ.
ಕೇಂದ್ರದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ರಾಸಾಯನಿಕ ಮತ್ತು ರಸಗೊಬ್ಬರ ಸಚಿವರಾಗಿರುವ ಮನಸುಖ್ ಮಂಡಾವಿಯಾ ಅವರನ್ನು ಅಣ್ಣಾಮಲೈ ಅವರ ಜತೆ ಸಹ ಉಸ್ತುವಾರಿಯಾಗ ನೇಮಿಸಲಾಗಿದೆ.
ಮನಸುಖ್ ಮಂಡಾವಿಯಾ ಅವರು ಕಾರ್ಯತಂತ್ರ ನಿಪುಣರಾಗಿರುವ ಜತೆಗೆ ಸಾಮಾಜಿಕ ಜಾಲತಾಣ ನಿರ್ವಹಣೆಯನ್ನೂ ಸಾಕಷ್ಟು ಪ್ರಬಲರಾಗಿ ಗಮನ ಸೆಳೆದಿದ್ದಾರೆ. ಹೀಗಾಗಿ ಅವರನ್ನು ಅಣ್ಣಾಮಲೈ ಅವರ ಜತೆಗೆ ಹೆಚ್ಚುವರಿಯಾಗಿ ನೇಮಕ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.