Wednesday, March 29, 2023

Latest Posts

50% ರಿಯಾಯಿತಿ ಲಾಭ ಪಡೆದುಕೊಂಡ ವಾಹನ ಸವಾರರು: ಎರಡು ದಿನದಲ್ಲಿ ಸಂಗ್ರಹವಾದ ಒಟ್ಟು ದಂಡದ ಮೊತ್ತವೆಷ್ಟು?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ರಾಜ್ಯ ಸಾರಿಗೆ ಇಲಾಖೆ, ಸಂಚಾರ ನಿಯಮ ಉಲ್ಲಂಘನೆ ದಂಡದ (Bengaluru Traffic Fines) ಮೊತ್ತವನ್ನು ಫೆ.11ರ ಒಳಗೆ ಪಾವತಿಸಿದರೇ ಶೇ.50 ವಿನಾಯಿತಿ ನೀಡುವುದಾಗಿ ಆದೇಶ ಹೊರಡಿಸಿದೆ.

ಇದರ ಬೆನ್ನಲ್ಲೇ ಟ್ರಾಫಿಕ್ ರೂಲ್ಸ್ ಉಲ್ಲಂಘಿಸಿದ್ದ ವಾಹನ ಸವಾರರು ದಂಡ ಪಾವತಿಸಲು ಇಂದು (ಫೆಬ್ರವರಿ 04) ಸಹ ಮುಗಿಬಿದ್ದಿದ್ದಾರೆ.
ಅದರಲ್ಲೂ ತಮ್ಮ ದ್ವಿಚಕ್ರ ವಾಹನ ಮೌಲ್ಯದಷ್ಟೇ ದಂಡ ಹೊಂದಿದ್ದ ವ್ಯಕ್ತಿಯೋರ್ವ 50 ಪರ್ಸೆಂಟ್ ಆಫರ್ ಸದುಪಯೋಗಪಡಿಸಿಕೊಂಡಿದ್ದು, ಬರೋಬ್ಬರಿ 29 ಸಾವಿರ ಮೊತ್ತದಷ್ಟು ದಂಡದ ಸಂಚಾರ ನಿಯಮಗಳ ಉಲ್ಲಂಘನೆ ಮಾಡಿದ್ದ ಬೈಕ್​ ಸವಾರನೋರ್ವ, ರಿಯಾಯಿತಿ ನೀಡಿದ್ದರಿಂದ 14,500 ರೂ. ಮಾತ್ರ ದಂಡ ಕಟ್ಟಿ ಕ್ಲಿಯರ್ ಮಾಡಿಕೊಂಡಿದ್ದಾರೆ.

ದ್ವಿಚಕ್ರ ವಾಹನ ಸವಾರನೋರ್ವ ಸಿಗ್ನಲ್ ಜಂಪ್, ಹೆಲ್ಮೇಟ್ ಧರಿಸದಿರುವುದು ಸೇರಿದಂತೆ ಹಲವು ಸಂಚಾರ ನಿಯಮ ಉಲ್ಲಂಘನೆ ಮಾಡಿದ್ದ. ಹಲವು ವರ್ಷಗಳಿಂದ ದಂಡವನ್ನು ಬಾಕಿ ಉಳಿಸಿಕೊಂಡಿದ್ದ. ಹೀಗಾಗಿ ಸಂಚಾರಿ ಪೊಲೀಸರು ಬರೋಬ್ಬರಿ 29 ಸಾವಿರ ದಂಡ ಹಾಕಿದ್ದರು. ಇದೀಗ 50 ರಿಯಾಯಿತಿ ನೀಡಿದ್ದರಿಂದ ಬೈಕ್ ಸವಾರ ಸಿಕ್ಕಿದ್ದೇ ಚಾನ್ಸ್ ಅಂತ ಬೆಂಗಳೂರಿನ ವೈಟ್ ಫೀಲ್ಡ್ ಸಂಚಾರಿ ಠಾಣೆ ಪೊಲೀಸರಿಗೆ (Bengaluru Traffic Police) 14,500 ರೂ. ದಂಡ ಪಾವತಿಸಿ ಎಲ್ಲಾ ಕೇಸ್ ಕ್ಲಿಯರ್ ಮಾಡಿಕೊಂಡರು.

ಎರಡು ದಿನದಲ್ಲಿ ವಾಹನ ಸವಾರರಿಂದ ಬರೋಬ್ಬರಿ 13 ಕೋಟಿ 81 ಲಕ್ಷ 13 ಸಾವಿರದ 621 ರೂಪಾಯಿ ಟ್ರಾಫಿಕ್ ದಂಡ ಸಂಗ್ರಹವಾಗಿದೆ. ಎರಡೇ ದಿನದಲ್ಲಿ ಬಾಕಿ ಉಳಿದಿದ್ದ 4 ಲಕ್ಷ 77 ಸಾವಿರದ 298 ಸಂಚಾರ ನಿಯಮ ಉಲ್ಲಂಘನೆ ಕೇಸ್ ಕ್ಲಿಯರ್ ಆಗಿವೆ. ಪೇಟಿಎಂ, ಬೆಂಗಳೂರು ಒನ್, ಸಂಚಾರ ಠಾಣೆ ಗಳಲ್ಲಿ ಟ್ರಾಫಿಕ್ ದಂಡವನ್ನು ಕ್ಲಿಯರ್ ಮಾಡಿಕೊಳ್ಳುತ್ತಿದ್ದಾರೆ.ಸದ್ಯ 2 ದಿನಗಳಿಂದ 13,81,13,621 ರೂಪಾಯಿ ಸಂಚಾರ ನಿಯಮ ಉಲ್ಲಂಘನೆ ದಂಡದ ಮೊತ್ತ ಪಾವತಿಯಾಗಿದೆ. ಬಾಕಿ ಉಳಿಸಿಕೊಂಡಿರುವ ಸಂಚಾರ ದಂಡವನ್ನು ಫೆ.11ರ ಒಳಗೆ ಪಾವತಿಸಿದರೇ ಶೇ.50 ವಿನಾಯಿತಿ ಸಿಗಲಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!