September 11, 2026
Friday, September 11, 2026
spot_img

625ಕ್ಕೆ 625 ಅಂಕ ಗಳಿಸಿ ಟಾಪರ್‌ ಆದ ಮಾನವಿಯ ಸುಖದೇವ್

ಹೊಸದಿಗಂತ ವರದಿ ರಾಯಚೂರು :

ಜಿಲ್ಲೆಯ ಮಾನವಿಯ ಬಿವಿಆರ್ ಶಾಲೆಯ ವಿದ್ಯಾರ್ಥಿ ಸುಖದೇವ 625 ಕ್ಕೆ 625 ಅಂಕ ಪಡೆದು ರಾಜ್ಯಕ್ಕೆ ಪ್ರಥಮ ಸ್ಥಾನವನ್ನು ಪಡೆದುಕೊಂಡಿದ್ದಾನೆ. ಎಸ್ಸೆಸ್ಸೆಲ್ಸಿ ಈ ಸಾಧನೆ ಮಾಡಿರುವುದು ಹೆಮ್ಮೆಯ ಸಂಗತಿ ಎಂದು ಶಾಲಾ ಆಡಳಿತ ಮಂಡಳಿ ಮೆಚ್ಚುಗೆ ವ್ಯಕ್ತಪಡಿಸಿದೆ.

ಸುಖದೇವನ ತಂದೆ ಪರಶುರಾಮ ಮಾನವಿಯ ಖಾಸಗಿ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕರಾಗಿ ಕಾರ್ಯನಿರ್ವಣೆ ಮಾಡುತ್ತಿದ್ದಾರೆ. ತಾಯಿ ಚಂದ್ರಕಲಾ ಪೋತನಾಳದ ಸರಕಾರಿ ಹೈಸ್ಕೂಲ್‌ನಲ್ಲಿ ಕನ್ನಡ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಸುಖದೇವ್‌ನಿಗೆ ಶಾಲಾ ಶಿಕ್ಷಕರು ಹೇಳುವ ಪಾಠ ಹಾಗೂ ಅವರ ಮಾರ್ಗದರ್ಶನ, ಮನೆಯಲ್ಲಿ ತಂದೆ ತಾಯಿಯ ಮಾರ್ಗದರ್ಶನ. ಯಾವುದೇ ಖಾಸಗಿಯವಾಗಿ ಮನೆ ಪಾಠವನ್ನು ಪಡೆದುಕೊಂಡಿಲ್ಲ. ಕಳೆದ ವರ್ಷ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಜಿಲ್ಲೆ ೩೨ನೇ ಸ್ಥಾನದಲ್ಲಿತ್ತು. ಈ ಬಾರಿ ೨೧ ಸ್ಥಾನಕ್ಕೆ ಏರುವ ಮೂಲಕ ಬಡ್ತಿ ಪಡೆದುಕೊಂಡಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !