Saturday, February 24, 2024

ಕ್ರಿಸ್ಟಿಯಾನೊ ರೊನಾಲ್ಡೊ ನಿರ್ಗಮನ ಬೆನ್ನೆಲ್ಲೇ ಮಾರಾಟಕ್ಕೆ ಸಜ್ಜಾದ ಮ್ಯಾಂಚೆಸ್ಟರ್ ಯುನೈಟೆಡ್ ಕ್ಲಬ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಫುಟ್ ಬಾಲ್ ಸರ್ವಶ್ರೇಷ್ಠ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ತಂಡ ತೊರೆದ ಕೆಲವೇ ಗಂಟೆಗಳಲ್ಲಿ ಮ್ಯಾಂಚೆಸ್ಟರ್ ಯುನೈಟೆಡ್ ಫುಟ್ಬಾಲ್​ ಕ್ಲಬ್ ಮಾರಾಟಕ್ಕೆ ಇಡಲಾಗಿದೆ.

ಕ್ರಿಶ್ಚಿಯಾನೋ ರೊನಾಲ್ಡೋ ಅವರನ್ನು ತಂಡದಿಂದ ಕೈಬಿಟ್ಟ ನಿರ್ಧಾರ ಘೋಷಣೆಯಾದ ದಿನವೇ ಕ್ಲಬ್‌ನ ಅಮೆರಿಕ ಮೂಲದ ಮಾಲೀಕರು ಮಾರಾಟದ ಸುದ್ದಿಯನ್ನು ಖಚಿತಪಡಿಸಿದ್ದಾರೆ.

ಇದರೊಂದಿಗೆ ಮ್ಯಾಂಚೆಸ್ಟರ್ ಯುನೈಟೆಡ್ ಮಾಲೀಕರಾಗಿರುವ ಅಮೆರಿಕದ ಗ್ಲೇಜರ್ ಕುಟುಂಬದ 17 ವರ್ಷಗಳ ಅಧಿಪತ್ಯಕ್ಕೆ ತೆರೆ ಬೀಳುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.

ಬುಧವಾರ ಪೋರ್ಚುಗಲ್ ಫುಟ್ಬಾಲ್ ಆಟಗಾರ ರೊನಾಲ್ಡೊ ಅವರು ಮ್ಯಾಂಚೆಸ್ಟರ್ ಯುನೈಟೆಡ್‌ ಕ್ಲಬ್​ಗೆ ಗುಡ್​ಬೈ ಹೇಳಿದ್ದರು. ಇದರ ಬೆನ್ನಲ್ಲೇ ಹೊಸ ಹೂಡಿಕೆ, ಮಾರಾಟ ಅಥವಾ ಇತರೆ ವಹಿವಾಟು ಸೇರಿದಂತೆ ಎಲ್ಲ ರೀತಿಯ ಪರ್ಯಾಯ ಕಾರ್ಯತಂತ್ರವನ್ನು ಕ್ಲಬ್ ಪರಿಗಣಿಸುತ್ತದೆ ಎಂದು ಮ್ಯಾಂಚೆಸ್ಟರ್ ಯುನೈಟೆಡ್ ಪ್ರಕಟಣೆ ತಿಳಿಸಿದೆ.

ಇಂಗ್ಲೆಂಡ್‌ನ ಒಲ್ಡ್ ಟ್ರಾಫರ್ಡ್​ನಲ್ಲಿರುವ ಮ್ಯಾಂಚೆಸ್ಟರ್ ಯುನೈಟೆಡ್ ಕ್ಲಬ್ 2005ರಲ್ಲಿ ಅಮೆರಿಕದ ಗ್ಲೇಜರ್ ಕುಟುಂಬ ಸ್ವಾಧೀನಪಡಿಸಿಕೊಂಡಿತ್ತು. ಕ್ಲಬ್‌ನ ಮ್ಯಾನೇಜರ್ ಅಲೆಕ್ಸ್ ಫರ್ಗ್ಯೂಸನ್ ನಿವೃತ್ತಿಯ ಬಳಿಕ ಕಳೆದ ಒಂಬತ್ತು ವರ್ಷಗಳಲ್ಲಿ ತಂಡ ಕಳಪೆ ಪ್ರದರ್ಶನ ತೋರಿತ್ತು. ಈ ಕಾರಣದಿಂದ ತಂಡದ ಆರ್ಥಿಕ ವರಮಾನವೂ ಕುಸಿತ ಕಂಡಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!