ಮೃದುವಾದ ಮಂಡಕ್ಕಿ ಪಡ್ಡು ಟ್ರೈ ಮಾಡಿ..

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಬೇಕಾಗುವ ಸಾಮಗ್ರಿ

3- ಕಪ್ ಮಂಡಕ್ಕಿ
1/2 ಕಪ್ ರವಾ
1/4 ಕಪ್ ಅಕ್ಕಿ ಹಿಟ್ಟು
1/2 ಕಪ್ ಮೊಸರು
ಅಗತ್ಯವಿರುವಂತೆ ನೀರು
ಅಡುಗೆಗೆ ತುಪ್ಪ ಅಥವಾ ಎಣ್ಣೆ
ನಿಮ್ಮ ರುಚಿಗೆ ತಕ್ಕಂತೆ ಉಪ್ಪು
1 ಈರುಳ್ಳಿ ಕತ್ತರಿಸಿದ
2-4 ಚಮಚ ಕೊತ್ತಂಬರಿ ಸೊಪ್ಪು
2 tbsp ಕತ್ತರಿಸಿದ ಕರಿಬೇವಿನ ಎಲೆಗಳು
1 ಹಸಿರು ಮೆಣಸಿನಕಾಯಿ ಕತ್ತರಿಸಿದ
1/2 ಟೀಸ್ಪೂನ್ ಕತ್ತರಿಸಿದ ಶುಂಠಿ

ಮಾಡುವ ವಿಧಾನ: 

ಒಂದು ಮಿಕ್ಸಿ ಜಾರಿಗೆ ಮಂಡಕ್ಕಿ, ರವೆ, ಅಕ್ಕಿಹಿಟ್ಟು ಹಾಕಿ ಪುಡಿ ಮಾಡಿ. ಅದಕ್ಕೆ ಸ್ವಲ್ಪ ನೀರು, ಮೊಸರು ಹಾಕಿ ಮತ್ತೊಮ್ಮೆ ಮಿಕ್ಸಿ ಮಾಡಿಕೊಳ್ಳಿ, ಮಿಶ್ರಣವನ್ನು ಒಂದು ಬೌಲ್‌ಗೆ ಸುರಿದು ಅಗತ್ಯಕ್ಕೆ ತಕ್ಕಷ್ಟು ನೀರು ಹಾಕಿ ಹದ ಮಾಡಿಕೊಳ್ಳಿ, ರುಚಿಗೆ ತಕ್ಕಷ್ಟು ಉಪ್ಪು, ಈರುಳ್ಳಿ, ಕರಿಬೇವು, ಕೊತ್ತಂಬರಿ,(ನಿಮಗಿಷ್ವಾದ ತರಕಾರಿ) ಮೆಣಸಿನಕಾಯಿ, ಶುಂಠಿ ಹಾಕಿ ಕಲಸಿ. ಪಡ್ಡು ಪ್ಯಾನ್‌ಗೆ ಎಣ್ಣೆ ಹಾಕಿ ಮೀಡಿಯಮ್‌ ಫ್ಲೇಮ್‌ನಲ್ಲಿ ಬೇಯಿಸಿದ್ರೆ ಪಡ್ಡು ರೆಡಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!